ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಪುರಸ್ಕಾರ
ಮಂಗಳೂರು : ವಿವಿಧ ಕಾರ್ಯಕ್ರಮ ಮತ್ತು ಸಮ್ಮೇಳನಗಳಲ್ಲಿ ಪ್ರಶಸ್ತಿ ಪಡೆದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಬೊಂದೆಲ್ ಎಂ ಎಸ್ ಎಂ ಎನ್ ಅ.30ರಂದು ನಡೆದ ಎಂಆರ್ಪಿಎಲ್ -ಎಂಎಸ್ ಎನ್ಎಮ್ ಸಂಯೋಜನೆಯ ವೃತ್ತಿಪರ ಕಾಲೇಜುಗಳ ಚರ್ಚಾ ಸ್ಪರ್ಧೆಯಲ್ಲಿ ಅಭಿಷೇಕ್ ಜೆ.ಸ್ಟಿಫನ್ ಹ್ಯಾರಿಸ್ , ಜೋಯೆಲ್ ದೀಪಕ್ ರವಿಕಾರ್ ಪ್ರಥಮ ಸ್ಥಾನವನ್ನು, ಅಮನ್ ಸ್ಯಾಮುವೆಲ್ ಫಿಲಿಫ್ ಮತ್ತು ಸುರಭಿ ಮಲ್ಹೋತ್ರಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ದಾವಣಗೆರೆಯಲ್ಲಿ ನಡೆದ 33ನೆ ದಕ್ಷಿಣ ವಲಯ ಪಿಡಿಯೋಕಾನ್ ಮತ್ತು 38ನೆ ಕಾರ್ ಪಿಡಿಯೋಕಾನ್ ವಾರ್ಷಿಕ ಸಮ್ಮೇಳನದಲ್ಲಿ ಡಾ.ದೀಪಾ ಜೋನ್ ಪ್ರಬಂಧ ಮಂಡನೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಫಾ.ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜಯ ಪ್ರಕಾಶ್ ಆಳ್ವ,ಎಫ್ಎಂಸಿಐ ನಿರ್ದೇಶಕ ವಂ.ರಿಚರ್ಡ್ ಕುಯೆಲ್ಲೋ, ಎಫ್ಎಂಎಂಸಿ ಆಡಳಿತ ನಿರ್ದೇಶಕ ವಂ.ಅಜಿತ್ ಬಿ.ಮಿನೇಜಸ್ ಮೊದಲಾವರು ವಿಜೇತರನ್ನು ಅಭಿನಂದಿಸಿದರು.