varthabharthi


ಈ ದಿನ

ಜರ್ಮನ್ ಗಣಿತಶಾಸ್ತ್ರಜ್ಞ ಗಾಟ್‌ಫ್ರೈಡ್ ವಿಲ್‌ಹೆಲ್ಮ್ ಲೆಬ್ನಿಝ್

ಈ ದಿನ

ವಾರ್ತಾ ಭಾರತಿ : 11 Nov, 2019

ಗಾಟ್‌ಫ್ರೈಡ್

1918: ವಿಶ್ವದ ಪ್ರಥಮ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳು ಮತ್ತು ಜರ್ಮನಿಯ ಮಧ್ಯೆ ನಡೆದ ಒಪ್ಪಂದವು ಅಧಿಕೃತವಾಗಿ ಜಾರಿಯಾಯಿತು. ಈ ಒಪ್ಪಂದವನ್ನು ಕ್ಯಾಂಪೇನ್ ಕದನವಿರಾಮ ಎಂದು ಕರೆಯಲಾಗಿದೆ. ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು, ಜರ್ಮನಿ ವಿರುದ್ಧ ಸಂಪೂರ್ಣ ವಿಜಯ ಸಾಧಿಸಿದವು.

1675: ಜರ್ಮನ್ ಗಣಿತಶಾಸ್ತ್ರಜ್ಞ ಗಾಟ್‌ಫ್ರೈಡ್ ವಿಲ್‌ಹೆಲ್ಮ್ ಲೆಬ್ನಿಝ್ ಅವರು ಪ್ರಥಮ ಬಾರಿಗೆ ಇಂಟಿಗ್ರಲ್ ಕ್ಯಾಲ್ಕುಲಸ್ ವಿಧಾನವನ್ನು ಪ್ರದರ್ಶಿಸಿದರು.

1836: ಬೋಲಿವಿಯಾ ಮತ್ತು ಪೆರು ದೇಶಗಳ ಮೇಲೆ ಚಿಲಿ ಯುದ್ಧ ಘೋಷಿಸಿತು.

1851: ಅಮೆರಿಕದ ಖಗೋಳಶಾಸ್ತ್ರಜ್ಞ ಆಲ್ವಾನ್ ಕ್ಲಾರ್ಕ್ ದೂರದರ್ಶಕದ ಸಂಶೋಧನೆಗೆ ಪೇಟೆಂಟ್ ಪಡೆದರು.

1930: ‘ಐನ್‌ಸ್ಟೀನ್ ರೆಫ್ರಿಜರೇಟರ್’ ಕಂಡುಹಿಡಿದ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ಲಿಯೋ ಝಿಲಾರ್ಡ್ ಅಮೆರಿಕದಿಂದ ಪೇಟೆಂಟ್ ಪಡೆದರು.

1940: ಅಮೆರಿಕದಲ್ಲಿ ಹಿಮಪಾತದಿಂದಾಗಿ 100 ಜನರು ಸಾವಿಗೀಡಾದರು.

1961: ರಶ್ಯದ ಐತಿಹಾಸಿಕ ನಗರ ಸ್ಟಾಲಿನಗಾರ್ಡ್‌ಗೆ ವೊಲ್ಗಾಗಾರ್ಡ್ ಎಂದು ಮರು ನಾಮಕರಣ ಮಾಡಲಾಯಿತು.

1975: ಅಂಗೋಲಾ ಸ್ವತಂತ್ರವಾಯಿತು.

2004: ಫೆಲೆಸ್ತೀನ್ ನಾಯಕ ಯಾಸಿರ್ ಅರಾಫತ್ ನಿಧನರಾದರೆಂದು ಫೆಲೆಸ್ತೀನ್ ಲಿಬರೇಷನ್ ಸಂಘಟನೆಯು ಖಚಿತಪಡಿಸಿತು.

2013: ಸೋಮಾಲಿಯಾದ ಪಂಟ್‌ಲ್ಯಾಂಡ್ ಪ್ರದೇಶದಲ್ಲಿ ಉಂಟಾದ ಉಷ್ಣವಲಯದ ಚಂಡಮಾರುತಕ್ಕೆ 100 ಜನರು ಬಲಿಯಾದರು.

1888:  ಭಾರತದ ಪ್ರಥಮ ಶಿಕ್ಷಣ ಮಂತ್ರಿ ಅಬುಲ್ ಕಲಾಮ್ ಆಝಾದ್ ಜನ್ಮದಿನ.

1926: ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯನಟ ಜಾನಿ ವಾಕರ್ ಜನ್ಮದಿನ.

2005: ಭಾರತದ ಪ್ರಖ್ಯಾತ ನೇತ್ರತಜ್ಞ ಡಾ. ಎಂ. ಸಿ. ಮೋದಿ ನಿಧನರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)