ಟಾಲಿವುಡ್ ನಟ ಪ್ರಯಾಣಿಸಿತ್ತಿದ್ದ ಕಾರು ಪಲ್ಟಿ
ಫೋಟೋ: bangaloremirror.indiatimes.com
ಹೈದರಾಬಾದ್, ನ.13: ಇಲ್ಲಿಗೆ ಸಮೀಪ ಬುಧವಾರ ನಸುಕಿನ ವೇಳೆ ಸಂಭವಿಸಿದ ವಾಹನ ಅವಘಡವೊಂದರಲ್ಲಿ ತೆಲುಗು ಚಿತ್ರ ನಟ ರಾಜಶೇಖರ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮುಂಜಾನೆ 1.20ರ ವೇಳೆಗೆ ಶಂಶಾಬಾದ್ನ ಹೊರ ವರ್ತುಲ ರಸ್ತೆಯಲ್ಲಿ ರಾಜಶೇಖರ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅದು ತಲೆಕೆಳಗಾಗಿ ಉರುಳಿತೆಂದು ಪೊಲೀಸರು ತಿಳಿಸಿದ್ದಾರೆ.
ತೆಲುಗು ನಟನ ವಿರುದ್ಧ ವೇಗದ ಹಾಗೂ ನಿರ್ಲಕ್ಷದಿಂದ ವಾಹನ ಚಾಲನೆಯ ಆರೋಪವನ್ನು ಹೊರಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಾಹನವನ್ನು ರಾಜಶೇಖರ್ಅವರೇ ಚಲಾಯಿಸುತ್ತಿದ್ದು, ಬೇರ್ಯಾರೂ ಇದ್ದಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ದಾರಿಹೋಕರೊಬ್ಬರ ನೆರವಿನಿಂದ ಅವರು ಪೊಲೀರಿಗೆ ಮಾಹಿತಿ ನೀಡಿದರು. ರಾಜಶೇಖರ್ ಅವರು ಸುರಕ್ಷಿತರಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 279(ಅತಿವೇಗದ ಚಾಲನೆ) ಹಾಗೂ 337 (ಇತರ ಪ್ರಾಣವನ್ನು ಅಪಾಯಕ್ಕೀಡು ಮಾಡುವುದು) ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಶೇಖರ್ ಅವರಿದ್ದ ವಾಹನದ ಟಯರ್ ಒಡೆದ್ದರಿಂದ ಅದು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ತಲೆಕೆಳಗಾಗಿ ಉರುಳಿತೆಂದು ಅವರ ಪತ್ನಿ ಜೀವಿತಾ ತಿಳಿಸಿದ್ದಾರೆ.