ಬ್ಯಾರೀಸ್ ಗ್ರೂಪ್ ಗೆ ಪ್ರತಿಷ್ಠಿತ 'ಕ್ರೆಡೈ ಕೇರ್ ಅವಾರ್ಡ್ 2019'
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಬ್ಯಾರೀಸ್ ಗ್ರೂಪ್ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದೆ. ಸಂಸ್ಥೆಯ ಬ್ಯಾರೀಸ್ ಗ್ರೀನ್ ಅವೆನ್ಯೂ ಯೋಜನೆ ಕನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಕರ್ನಾಟಕ ಆಯೋಜಿಸಿದ್ದ ಕ್ರೆಡೈ ಕೇರ್ ಅವಾರ್ಡ್ 2019ರಲ್ಲಿ 'ದಿ ಔಟ್ ಸ್ಟಾಂಡಿಂಗ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ (ಶ್ರೇಷ್ಠ ವಸತಿ ಯೋಜನೆ)' ಪ್ರಶಸ್ತಿ ಪಡೆದಿದೆ.
ಈ ಯೋಜನೆ ಈಗಾಗಲೇ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ)ಯಿಂದ ಪ್ಲಾಟಿನಮ್ ಪ್ರಮಾಣಪತ್ರ ಪಡೆದಿದೆ.
"ಬ್ಯಾರೀಸ್ ಗ್ರೀನ್ ಅವೆನ್ಯೂ ಉಡುಪಿ ಜಿಲ್ಲೆಯ ಕೋಟೇಶ್ವರ ಎಂಬ ಪುಟ್ಟ ಊರಿನಲ್ಲಿ ನಿರ್ಮಾಣವಾಗಿದ್ದರೂ ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮಾದರಿಯಾಗಿ ಶ್ರೇಷ್ಠ ವಿನ್ಯಾಸದಲ್ಲಿ ಬ್ರಹತ್ ನಗರಗಳ ವಸತಿ ಯೋಜನೆಗಳಿಗೆ ಸರಿಸಮನಾಗಿರುವುದು ಅತ್ಯಂತ ಹೆಮ್ಮೆಯ ವಿಷಯ" ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಬೆಂಗಳೂರಿನ ಹೋಟೆಲ್ ಫೋರ್ ಸೀಸನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾರೀಸ್ ಗ್ರೂಪ್ ನಿರ್ದೇಶಕ ಸಿದ್ದೀಕ್ ಬ್ಯಾರಿ ಹಾಗೂ ಅವರ ಪುತ್ರ ಅಬುಲ್ ಹಸನ್ ಬ್ಯಾರಿ ಪ್ರಶಸ್ತಿ ಸ್ವೀಕರಿಸಿದರು.