varthabharthi


ಈ ದಿನ

ಲಾಲಾ ಲಜಪತ್ ರಾಯ್‌ಗೆ ಮಾರಣಾಂತಿಕ ಪೊಲೀಸ್ ದಾಳಿ

ವಾರ್ತಾ ಭಾರತಿ : 16 Nov, 2019

1603: ಇಂಗ್ಲೆಂಡ್‌ನ ಶೋಧಕ, ಲೇಖಕ ಸರ್.ವಾಲ್ಟರ್ ರಾಲೆ ದೇಶದ್ರೋಹದ ಆಪಾದನೆ ಕುರಿತು ವಿಚಾರಣೆ ಎದುರಿಸಿದರು.

1896: ಮೆಡಿಟರೇನಿಯನ್ ಮತ್ತು ಕೆಂಪುಸಮುದ್ರವನ್ನು ಜೋಡಿಸುವ ಸೂಯೆಝ್ ಕಾಲುವೆಯನ್ನು ಈಜಿಪ್ಟ್‌ನಲ್ಲಿ ಲೋಕಾರ್ಪಣೆಗೊಳಿಸಲಾಯಿತು.

1928: ಸೈಮನ್ ಆಯೋಗವನ್ನು ವಿರೋಧಿಸಿ ರಾಷ್ಟ್ರವಾದಿ, ಸ್ವಾತಂತ್ರ ಹೋರಾಟಗಾರ ಲಾಲಾ ಲಜಪತ್ ರಾಯ್ ಮತ್ತು ಸಂಗಡಿಗರು ಅಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಮಾರಣಾಂತಿಕವಾಗಿ ಲಾಠಿ ಬೀಸಿದರು. ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಜಪತ್‌ರಾಯ್ ಹೃದಯಾಘಾತದಿಂದ ನಿಧನರಾದರು.

1953: ಜೋರ್ಡಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿತು. ಇದಕ್ಕೆ ಅಮೆರಿಕವೂ ದನಿಗೂಡಿಸಿತು.

1970: ಲುನೊಕೋಡ್ 1 ಎಂಬ ಮಾನವರಹಿತ ದೂರನಿಯಂತ್ರಿತ ರೋವರ್ ವಾಹನವನ್ನು ಚಂದ್ರನ ಮೇಲೆ ಇಳಿಸಲಾಯಿತು.

1970: ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿ ಡಗ್ಲಾಸ್ ಎಂಗಲ್‌ಬರ್ಟ್ ಪ್ರಥಮ ಕಂಪ್ಯೂಟರ್ ವೌಸ್‌ಗೆ ಪೇಟೆಂಟ್ ಪಡೆದರು.

2008: ವಿಶ್ವದ ಪ್ರಮುಖ ಆರ್ಥಿಕತೆಯನ್ನು ಹೊಂದಿದ ಜಪಾನ್ ಮೊದಲ 7 ವರ್ಷಗಳಲ್ಲೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಒಳಗಾಯಿತು.

2015: ಈಶಾನ್ಯ ನೈಜೀರಿಯಾದ ಯೋಲಾ ಮಾರ್ಕೆಟ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ 30 ಜನರು ಬಲಿಯಾದರು.

1920: ತಮಿಳು ಚಿತ್ರರಂಗದ ಖ್ಯಾತ ನಟ ಜೆಮಿನಿ ಗಣೇಶನ್ ಜನ್ಮದಿನ.

1935: ಭಾರತದ ಖ್ಯಾತ ಸಿತಾರ್ ಹಾಗೂ ಸುರ್‌ಬಹಾರ್ ವಾದಕ ಮತ್ತು ಸಂಯೋಜಕ ಇಮ್ರತ್ ಜನ್ಮದಿನ.

2012: ಶಿವಸೇನೆ ಪಕ್ಷದ ಸಂಸ್ಥಾಪಕ, ವ್ಯಂಗ್ಯಚಿತ್ರಕಾರ ಬಾಳಾ ಠಾಕ್ರೆ ನಿಧನರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)