varthabharthi


ಈ ದಿನ

ಈ ದಿನ

‘ಆಪರೇಷನ್ ಯುರೇನಸ್’ ಯುದ್ಧ ಕಾರ್ಯಾಚರಣೆ ಆರಂಭ

ವಾರ್ತಾ ಭಾರತಿ : 19 Nov, 2019

1816: ಪೋಲೆಂಡ್‌ನ ಅತ್ಯಂತ ದೊಡ್ಡ ವಿಶ್ವವಿದ್ಯಾನಿಲಯ ವಾರ್ಸಾ ವಿವಿ ಆರಂಭಗೊಂಡಿತು.

1824: ರಶ್ಯದ ಹಳೆಯ ರಾಜಧಾನಿ ಹಾಗೂ ಪ್ರಮುಖ ಪಟ್ಟಣವಾದ ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿ ಹಿಮಕರಗುವಿಕೆಯಿಂದ ಉಂಟಾದ ಬೃಹತ್ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರು ಅಸುನೀಗಿದರು.

1942: 2ನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿ ಹಾಗೂ ರಶ್ಯಗಳ ಮಧ್ಯೆ ನಡೆದ ಐತಿಹಾಸಿಕ ಸ್ಟಾಲಿನ್‌ಗಾರ್ಡ್ ಕದನದಲ್ಲಿ ರಶ್ಯನ್ ಜನರಲ್ ಜಾರ್ಜಿ ಝುಕೋವ್ ಜರ್ಮನಿಗೆ ಪ್ರತಿರೋಧವಾಗಿ ‘ಆಪರೇಷನ್ ಯುರೇನಸ್’ ಎಂಬ ಯುದ್ಧ ಕಾರ್ಯಾಚರಣೆ ಆರಂಭಿಸಿದರು.

1969: ಬ್ರೆಝಿಲ್ ಫುಟ್ಬಾಲ್‌ನ ಜೀವಂತ ದಂತಕತೆ ಪೀಲೆ ವಾಸ್ಕೋ ಡ ಗಾಮಾ ತಂಡದ ವಿರುದ್ಧ ಬ್ರೆಝಿಲ್‌ನ ರಿಯೋ ಡಿ ಜನೈರೋದ ಮರಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಾಖಲೆಯ 1,000ನೇ ಗೋಲು ಬಾರಿಸಿದರು.

2013: ಲೆಬನಾನ್‌ನ ಬೀರತ್‌ನಲ್ಲಿ ಇರಾನಿಯನ್ ರಾಯಭಾರಿ ಕಚೇರಿ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 20 ಜನ ಸಾವಿಗೀಡಾದರು. ಸುಮಾರು 150 ಜನರು ಗಾಯಗೊಂಡರು.

2017: ಝಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ತಮ್ಮ ಪಕ್ಷದ ನಾಯಕತ್ವದಿಂದ ವಜಾಗೊಂಡರೂ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

1828: ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನ.

1917: ಭಾರತದ 3ನೇ ಹಾಗೂ ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಜನ್ಮದಿನ. 

1951: ಖ್ಯಾತ ಹಿಂದಿ ಚಿತ್ರತಾರೆ ಝೀನತ್ ಅಮಾನ್ ಜನ್ಮದಿನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)