ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಉಡುಪಿ, ನ.25:ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ದೃಷ್ಠಿ ಯಿಂದ ದೂರು ಅರ್ಜಿಗಳನ್ನು ನ.27ರಂದು ಬೆಳಿಗ್ಗೆ 11ರಿಂದ 12:30ರವರೆಗೆ ಬೈಂದೂರು ತಾಲೂಕು ಕಚೇರಿ, ನ.28ರಂದು ಬೆಳಿಗ್ಗೆ 11ರಿಂದ 12:30ರವರೆಗೆ ಕಾಪು ತಾಲೂಕು ಕಚೇರಿ ಹಾಗೂ ನ.29ರಂದು ಬೆಳಿಗ್ಗೆ 11ರಿಂದ 12:30ರವರೆಗೆ ಹೆಬ್ರಿ ತಾಲೂಕು ಕಚೇರಿಯಲ್ಲಿ ದೂರು ಸ್ವೀಕರಿಸಲಾಗುವುದು.
ಉಡುಪಿ ತಾಲೂಕಿಗೆ ಸಂಬಂದಪಟ್ಟ ದೂರು ಅರ್ಜಿಗಳನ್ನು ಕರ್ನಾಟಕ ಲೋಕಾಯಕದ್ತ ಉಡುಪಿ ಕಚೇರಿಯಲ್ಲಿ ಸ್ವೀಕರಿಸಲಾ ಗುವುದು. ಹೆಚ್ಚಿನ ಮಾಹಿತಿಗೆ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ, ದೂರವಾಣಿ ಸಂಖ್ಯೆ -0820-2527770, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ದೂರವಾಣಿ ಸಂಖ್ಯೆ:0820-2536661 ಸಂಪರ್ಕಿ ಸಬಹುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಕರ್ನಾಟಕ ಲೋಕಾಯುಕ್ತ ಉಡುಪಿ ಇವರ ಪ್ರಕಟಣೆ ತಿಳಿಸಿದೆ.