ಪಾದುವದಲ್ಲಿ ‘ಝುಜ್' ಕೊಂಕಣಿ ನಾಟಕ ಪ್ರದರ್ಶನ
ಲೋಗೋಸ್ ನಾಟಕೋತ್ಸವ
ಮಂಗಳೂರು, ನ.26: ಪಾದುವ ಥಿಯೇಟರ್ ಹಬ್ ನಲ್ಲಿ ಲೋಗೋಸ್ ಥಿಯೇಟರ್ ಟ್ರೂಪ್ ಆಯೋಜಿಸಿದ ಲೋಗೋಸ್ ನಾಟಕೋತ್ಸವದಲ್ಲಿ ವಂ.ಆಲ್ವಿನ್ ಸೆರಾವೊ ರಚಿಸಿದ, ಪಾದುವ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸಿದ ಝುಜ್ ಎಂಬ ಕೊಂಕಣಿ ನಾಟಕ ರವಿವಾರ ಸಂಜೆ ಪ್ರದರ್ಶನಗೊಂಡಿತು.
ನೀನಾಸಮ್ ಕ್ರಿಸ್ಟಿ ಹಾಗೂ ಕ್ಲ್ಯಾನ್ವಿನ್ ಫೆರ್ನಾಂಡಿಸ್ ನಟನೆಯ ಈ ನಾಟಕದಲ್ಲಿ ಆ್ಯನ್ಸ್ಟಿನ್ ಮಚಾದೊ ಅವರ ಸಂಗೀತ ಹಾಗೂ ಆಹಾರ್ಯಂ ಸಂಸ್ಥೆ ತಾಂತ್ರಿಕತೆಯಲ್ಲಿ ಸಹಕಾರ ನೀಡಿತ್ತು.
ಈ ಸಂದರ್ಭದಲ್ಲಿ ಲೋಗೋಸ್ ಥಿಯೇಟರ್ ಟ್ರೂಪ್ ತಂಡದ ಲೋಗೋವನ್ನು ಮಂಗಳೂರು ಬಿಷಪ್ ಅತೀ ವಂ. ಪೀಟರ್ ಪಾವ್ಲ್ ಸಲ್ದಾನ ಲೋಕಾರ್ಪಣೆಗೈದರು.
ಲೋಗೋಸ್ ಥಿಯೇಟರ್ ಟ್ರೂಪ್ ಕಳೆದ ವರ್ಷದಿಂದ ವಂ.ಆಲ್ವಿನ್ ಸೆರಾವೊ ನೇತೃತ್ವದಲ್ಲಿ ಸಕ್ರೀಯವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದೆ.
Next Story