ಕೈಕಂಬ : ತ್ವೈಬಾ ಮೀಲಾದ್ ಫೆಸ್ಟ್ ಸಮಾರೋಪ
ಗುರುಪುರ ಕೈಕಂಬ: ತ್ವೈಬಾ ಕುರ್ಆನ್ ಅಕಾಡಮಿ ಇದರ ಆಶ್ರಯದಲ್ಲಿ ಹಿಫ್ಳುಲ್ ಕುರ್ಆನ್ ವಿದ್ಯಾರ್ಥಿಗಳಿಂದ ಮತ್ತು ಹಯಾತುಸುನ್ನಃ ದರ್ಸ್ ವಿದ್ಯಾರ್ಥಿಗಳಿಂದ ಮಿಲಾದ್ ಫೆಸ್ಟ್ ಕಾರ್ಯಕ್ರಮವು ಮರ್ಹೂಂ ಫಳ್ಲ್ ಹಾಜಿ ವೇದಿಕೆ, ಮೇಗಾ ಪ್ಲಾಝಾದಲ್ಲಿ ನಡೆಯಿತು.
ಸಂಸ್ಥೆಯ ಚೆರ್ಮ್ಯಾನ್ ಹಾಫಿಳ್ ಅನ್ಸಾರ್ ಸಅದಿ ಬಡಕಬೈಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಯದ್ ನಿಝಾಮುದ್ದೀನ್ ಬಾಫಖಿ ತಂಙಳ್ ಮಲ್ಲೂರು, ಸಯ್ಯದ್ ಶಿಹಾಬುದ್ದೀನ್ ತಂಙಳ್ ಲಕ್ಷದೀಪ್ ದುಆಃ ಆಶೀರ್ವಚನ ನೀಡಿದರು.
ಮರ್ಕಝ್ ಕೈಕಂಬ ಚೇರ್ಮ್ಯಾನ್ ಬದ್ರುದ್ದೀನ್ ಅಝ್ಹರಿ ಅಲ್-ಕಾಮಿಲ್, ಮಹಮ್ಮದ್ ಹನೀಫ್ ಖಾಸಿಮಿ ಕುಪ್ಪೆಪದವು, ಉಸ್ಮಾನ್ ಫಾಳಿಲಿ ಕಂದಾವರ, ಮುಜೀಬ್ ಮುಸ್ಲಿಯಾರ್ ಕುಪ್ಪೆಪದವು, ಹಸನ್ ಮದನಿ ಕೈಕಂಬ, ಮುಬಾರಕ್ ಸಖಾಫಿ ವಾಮಂಜೂರು, ಉಬೈದುಲ್ಲಾ ಸಖಾಫಿ ಅಡ್ಡೂರು, ಅಬ್ದುಲ್ ರಝಾಕ್ ಮದನಿ ಕಂದಾವರ, ಸ್ವಾದಿಕ್ ಮುಸ್ಲಿಯಾರ್ ಕಂದಾವರ, ಮಹಮ್ಮದ್ ಸಖಾಫಿ ಬಡಕಬೈಲ್, ಟಿ.ಎಂ. ಉಸ್ತಾದ್ ಕೈಕಂಬ, ಅಬ್ವಾಸ್ ನಿಝಾಮಿ ಎಡಪದವು, ಉಸ್ಮಾನ್ ಸಖಾಫಿ ವಾಮಂಜೂರು, ಹುಸೈನ್ ಸಖಾಫಿ ಮಲ್ಲೂರು, ಪ್ರೊ. ನಾಸಿರ್ ಸರ್ ಬಾಮಿ ಸ್ಕೂಲ್, ಪ್ರೊ. ಮೊಹಮ್ಮದ್ ಅಲಿ ಸರ್ ಗುರುಕಂಬಳ, ಅಬ್ದುಲ್ ಅಝೀಝ್ ಮೇಗಾ ಪ್ಲಾಝಾ, ಮುಹಮ್ಮದ್ ಶರೀಫ್ ಶೀಬಾ, ಅಬ್ದುರ್ರಹ್ಮಾನ್ ಮೂನ್ಲೈಟ್, ಮುಹಮ್ಮದ್ ಶರೀಫ್ ಅಡ್ಡೂರು, ನಜೀಬ್ ಸಲೀನಾ, ಬಶೀರ್ ಹಾಜಿ ಎಡಪದವು, ಟಿ.ಎಂ. ಖಾದರ್ ಹಾಜಿ ಪರಾರಿ, ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ, ಎಂ.ಎಸ್. ಆಲಿಯಬ್ಬ ಹಾಜಿ ಮೂಡುಕೆರೆ, ಕಲಂದರ್ ಬಜ್ಪೆ, ಅಬ್ದುಲ್ ಹಮೀದ್ ಎಸ್.ವೈ.ಎಸ್., ಮನ್ಸೂರ್ ಹಾಜಿ ಅಮ್ಮುಂಜೆ ಹಾಗೂ ಇತರರು ಉಪಸ್ಥಿತರಿದ್ದರು.
ತ್ವೈಬಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಯು. ಶಾಫಿ ಮದನಿ ಕರಾಯ ಸ್ವಾಗತಿಸಿದರು. ಕೋರ್ಡಿನೇಟರ್ ಪ್ರೊ. ಸ್ವಾದಿಕ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.