‘ಸತಿ ಸಹಗಮನ’ ನಿಷೇಧ
ಈ ದಿನ
1829: ಪತಿ ಮರಣ ಹೊಂದಿದಾಗ ಪತ್ನಿಯೂ ಆತನನ್ನು ಹಿಂಬಾಲಿಸಿ ಆತನ ಚಿತೆಗೆ ಹಾರಿ ಜೀವವನ್ನು ಅರ್ಪಿಸಬೇಕೆಂಬ ಕ್ರೂರ ‘ಸತಿ ಸಹಗಮನ’ ಪದ್ಧತಿಯು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಬ್ರಿಟಿಷ್ ಸರಕಾರ ಘೋಷಿಸಿತು. ಹಲವಾರು ವರ್ಷಗಳಿಂದ ಈ ಅನಾಗರಿಕ, ಹೇಯ ಪದ್ಧತಿಯಿಂದ ನಲುಗಿದ್ದ ಮಹಿಳಾ ಸಮಾಜ ನಿಟ್ಟುಸಿರು ಬಿಡುವಂತಾಯಿತು.
1644: ಪ್ರಥಮ ಯುರೋಪಿಯನ್ ಶಾಂತಿ ಸಮ್ಮೇಳನ ಜರ್ಮನಿಯ ಮಾನ್‌ಸ್ಟರ್ ಎಂಬಲ್ಲಿ ಆರಂಭಗೊಂಡಿತು.
1791: ವಿಶ್ವದ ಅತ್ಯಂತ ಹಳೆಯ ವಾರಪತ್ರಿಕೆ ಬ್ರಿಟನ್‌ನ ‘ದ ಆಬ್ಸರ್ವರ್’ ಪ್ರಕಟನೆ ಆರಂಭಿಸಿತು.
1952: ಲಂಡನ್‌ನಲ್ಲಿ ಕಾರ್ಖಾನೆಗಳು, ಕಾರ್‌ಗಳು ಮತ್ತು ಕಲ್ಲಿದ್ದಲಿನ ಬೆಂಕಿಯಿಂದುಂಟಾದ ಸಲ್ಫರ್ ಡೈ ಆಕ್ಸೈಡ್‌ನ ಮಾರಣಾಂತಿಕ ದಟ್ಟ ಹೊಗೆಗೆ ಸುಮಾರು 4,000 ಜನರು ಬಲಿಯಾಗಿರುವ ಘಟನೆ ವರದಿಯಾಯಿತು. ಸುಮಾರು 4 ದಿನಗಳ ಕಾಲ ಈ ಹೊಗೆ ಲಂಡನ್‌ನಲ್ಲಿ ಆವರಿಸಿಕೊಂಡಿತ್ತು.
1957: ಇಂಗ್ಲೆಂಡ್‌ನ ಎರಡು ಪ್ರಯಾಣಿಕ ರೈಲುಗಳು ದಟ್ಟ ಮಂಜಿನ ಕಾರಣದಿಂದ ಪರಸ್ಪರ ಢಿಕ್ಕಿಯಾಗಿ 92 ಜನರು ಮೃತಪಟ್ಟರು.
1971: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹದಗೆಟ್ಟ ರಾಜತಾಂತ್ರಿಕ ಸಂಬಂಧಗಳನ್ನು ಪರಿಗಣಿಸಿ ವಿಶ್ವಸಂಸ್ಥೆ ಭದ್ರತಾ ಸಮಿತಿಯು ತುರ್ತು ಅಧಿವೇಶನ ಕರೆಯಿತು.
1982: ಚೀನಾದಿಂದ ಸಂವಿಧಾನ ಅಂಗೀಕಾರ.
2012: ಫಿಲಿಪ್ಪೀನ್ಸ್‌ನಲ್ಲಿ ಬೋಫಾ ಹೆಸರಿನ ಚಂಡಮಾರುತದಿಂದಾಗಿ ಭೂ ಕುಸಿತ ಉಂಟಾಗಿ 81 ಜನರು ಮೃತರಾದರು.
2015: ಒಂದು ತಿಂಗಳು ಕಾಲ ತಮಿಳುನಾಡಿನಲ್ಲಿ ಭಾರೀ ಮಳೆ ಸುರಿದ ಕಾರಣ ಪ್ರವಾಹ ಪರಿಸ್ಥಿತಿ ತಲೆದೋರಿತು. ಇದು ಸುಮಾರು 260 ಜನರ ಸಾವಿಗೆ ಕಾರಣವಾಯಿತು.
1910: ಭಾರತದ ಸ್ವಾತಂತ್ರ ಹೋರಾಟಗಾರ, ನ್ಯಾಯವಾದಿ, ಭಾರತದ 8ನೇ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಜನ್ಮದಿನ.
1919: ಭಾರತದ 12ನೇ ಪ್ರಧಾನಮಂತ್ರಿ ಐ.ಕೆ. ಗುಜ್ರಾಲ್ ಜನ್ಮದಿನ.