ಡಿಸೆಂಬರ್ 6ರ ನಂತರದ 'ದುಬಾರಿ ದರ'ಗಳನ್ನು ಪ್ರಕಟಿಸಿದ 'ಜಿಯೋ': ಹೀಗಿದೆ ಹೊಸ ರಿಚಾರ್ಜ್ ಪಟ್ಟಿ
Photo: Reuters
ಹೊಸದಿಲ್ಲಿ: ಡಿಸೆಂಬರ್ 6ರಿಂದ ರಿಲಯನ್ಸ್ ಜಿಯೋದ ಟ್ಯಾರಿಫ್ ಗಳು ಬದಲಾಗಲಿದ್ದು, ಹಿಂದಿನ ಬೆಲೆಗೆ ಹೋಲಿಸಿದರೆ ಈ ದಿನಾಂಕದಿಂದ 40 ಶೇ.ದಷ್ಟು ಟ್ಯಾರಿಫ್ ಬೆಲೆಗಳು ಹೆಚ್ಚಾಗಲಿವೆ.
ಹೊಸ ಟ್ಯಾರಿಫ್ ಗಳು 199 ರೂ.ಗಳಿಂದ ಹಿಡಿದು 2,199 ರೂ.ಗಳವರೆಗೆ ಇದೆ. 199 ರೂ. ರಿಚಾರ್ಜ್ ಗೆ 28 ದಿನಗಳ ವ್ಯಾಲಿಡಿಟಿ, 399 ರೂ.ಗೆ 56 ದಿನಗಳ ವ್ಯಾಲಿಡಿಟಿ, 555 ರೂ.ಗೆ 84 ದಿನಗಳ ವ್ಯಾಲಿಡಿಟಿ, 2199 ರೂ.ಗೆ 365 ದಿನಗಳ ವ್ಯಾಲಿಡಿಟಿ ಇರಲಿದೆ.
ಹೊಸ ದರಗಳು ಡಿಸೆಂಬರ್ 6ರಿಂದ ಜಾರಿಗೆ ಬರಲಿದ್ದು, 40 ಶೇ. ದರ ಹೆಚ್ಚಳದ ಜೊತೆಗೆ ಗ್ರಾಹಕರಿಗೆ 300 ಶೇ. ಪ್ರಯೋಜನಗಳನ್ನು ನೀಡಲಾಗುವುದು ಎಂದು ಜಿಯೋ ತಿಳಿಸಿದೆ.
ಈ ನಡುವೆ ಅಡ್ವಾನ್ಸ್ ರಿಚಾರ್ಜ್ ಮಾಡುವ ಮೂಲಕ ಹಳೆಯ ಮೊತ್ತವನ್ನೇ ಪಾವತಿಸುವ ಕೊಡುಗೆಯನ್ನು ಜಿಯೋ ಗ್ರಾಹಕರ ಮುಂದಿಟ್ಟಿದೆ. ಇದಕ್ಕಾಗಿ ಗ್ರಾಹಕರು ಡಿಸೆಂಬರ್ 6ರ ಮೊದಲು 336 ದಿನಗಳಿಗೆ ಒಮ್ಮೆಗೇ ರಿಚಾರ್ಜ್ ಮಾಡಬೇಕಿದೆ. 444 ರೂ.ನಂತೆ 4 ಬಾರಿಯ ರಿಚಾರ್ಜ್ ಇದಾಗಿದೆ. 444 ರೂ. ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡಾಟಾ ದೊರೆಯಲಿದೆ. ಪ್ರತಿಯೊಂದು 444 ರೂ. ರಿಚಾರ್ಜ್ ವ್ಯಾಲಿಡಿಟಿ 84 ದಿನಗಳ ಕಾಲ ಇರಲಿದ್ದು, ಗ್ರಾಹಕರು ಡಿಸೆಂಬರ್ 6ಕ್ಕೆ ಮೊದಲು 444 ರೂ.ಗಳನ್ನು 4 ಬಾರಿ ರಿಚಾರ್ಜ್ ಮಾಡಬೇಕಿದೆ.