varthabharthi


ಈ ದಿನ

ಮಹತ್ವದ ಒಪ್ಪಂದಕ್ಕೆ ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ಸಹಿ

ವಾರ್ತಾ ಭಾರತಿ : 8 Dec, 2019

1941: ಪರ್ಲ್‌ಹಾರ್ಬರ್ ಮೇಲೆ ಜಪಾನ್‌ನ ಅಪ್ರಚೋದಿತ ದಾಳಿಯಿಂದ ಕ್ರುದ್ಧಗೊಂಡ ಅಮೆರಿಕ ಜಪಾನ್ ವಿರುದ್ಧ ಯುದ್ಧ ಸಾರುವ ಮೂಲಕ 2ನೇ ವಿಶ್ವ ಮಹಾಯುದ್ಧಕ್ಕೆ ಪ್ರವೇಶಿಸಿತು.

1965: ಇಂಗ್ಲೆಂಡ್‌ನಲ್ಲಿ ಜನರನ್ನು ಬಣ್ಣ, ಜನಾಂಗೀಯತೆ, ರಾಷ್ಟ್ರೀಯತೆಯ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸಿ ‘ಜನಾಂಗೀಯ ಸಂಬಂಧಿ ಕಾಯ್ದೆ’ಯನ್ನು ಜಾರಿಗೊಳಿಸಲಾಯಿತು.

1972: ಯುನೈಟೆಡ್ ಏರ್‌ಲೈನ್ಸ್ ವಿಮಾನವು ಚಿಕಾಗೋದ ಮಿಡ್‌ವೇ ಏರ್‌ಪೋರ್ಟ್‌ನಲ್ಲಿ ಪತನಗೊಂಡ ಪರಿಣಾಮ 45 ಜನರು ಮೃತರಾದರು.

1982: ಖ್ಯಾತ ಲೇಖಕ ಕೊಲಂಬಿಯಾದ ಗೇಬ್ರಿಯಲ್ ಮಾರ್ಕ್‌ವೆಝ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದರು.

1987: 30 ವರ್ಷಗಳ ಶೀತಲ ಸಮರದಲ್ಲಿ ತಯಾರಿಸಿದ್ದ ಭೂ ಆಧಾರಿತ ಪರಮಾಣು ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಮಹತ್ವದ ಒಪ್ಪಂದಕ್ಕೆ ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ಸಹಿ ಹಾಕಿದವು.

1993: ದ ನಾರ್ಥ್ ಅಮೆರಿಕನ್ ಫ್ರಿ ಟ್ರೇಡ್ ಅಗ್ರಿಮೆಂಟ್ (ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ) ಕಾಯ್ದೆಗೆ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಸಹಿ ಹಾಕಿದರು. ಜಿಡಿಪಿ ಪರಿಭಾಷೆಯಲ್ಲಿ ಇದೊಂದು ವಿಶ್ವದ ಅತ್ಯಂತ ಪ್ರಮುಖ ವ್ಯಾಪಾರ ಕೂಟ ಹಾಗೂ ಒಪ್ಪಂದವಾಗಿದೆ.

2004: ಇರಾಕ್‌ನಲ್ಲಿ ಬಂಡಾಯಗಾರರು ಹಾಗೂ ಅಮೆರಿಕ ಪಡೆಗಳ ಮಧ್ಯೆ ನಡೆಯುತ್ತಿದ್ದ ಘನಘೋರ ಕದನದ ಪರಿಣಾಮ ಎರಡು ತಿಂಗಳುಗಳ ಕಾಲ ಇರಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

2009: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಬಾಂಬ್ ಸ್ಫೋಟಗೊಂಡು 127 ಜನರು ಸಾವಿಗೀಡಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)