ಚಂದ್ರನಗರ ಕ್ರೆಸೆಂಟ್ ಶಾಲಾ ವಾರ್ಷಿಕ ಕ್ರೀಡಾಕೂಟ
ಕಾಪು, ಡಿ.8: ಚಂದ್ರನಗರದ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕ್ರೀಡಾಕೂಟವು ಶನಿಾರ ಶಾಲಾ ಕ್ರೀಡಾಂಗಣ ದಲ್ಲಿ ಜರಗಿತು.
ಕ್ರೀಡಾಕೂಟವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಹಾಜಿ ಕೆ.ಪಿ. ಇಬ್ರಾಹಿಂ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಮಧುಕರ್ ಎಸ್., ಶಾಲಾ ಅಧ್ಯಕ್ಷ ಶಂಶುದ್ದೀನ್ ಯೂಸೂಫ್ ಸಾಹೇಬ್, ಆಡಳಿತ ನಿರ್ದೇಶಕಿ ಶಾನಾಝ್ ಬೇಗಂ, ಕಾರ್ಯದರ್ಶಿ ಆದಿಲ್ ಶಂಶುದ್ದೀನ್, ಕಾನೂನು ಸಲಹೆಗಾರ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಆಸ್ಮಾ ಕಾಝಿ ಸ್ವಾಗತಿಸಿದರು. ಪ್ರಾಂಶುಪಾಲ ಜೆ.ಪಿ. ಮಾರ್ಟಿಸ್ ವಂದಿಸಿದರು. ಅುಣಾ ಕಾರ್ಯಕ್ರಮ ನಿರೂಪಿಸಿದರು.
Next Story