ಕರ್ಣಾಟಕ ಬ್ಯಾಂಕ್‌ನಿಂದ ಸಚಿತ್ರ ಸಂದೇಶವುಳ್ಳ ಫಲಕಗಳ ಅನಾವರಣ
ಮಂಗಳೂರು, ಡಿ.13: ಮಂಗಳೂರಿನಿಂದ-ಮುಂಬೈಗೆ ನಿತ್ಯ ಚಲಿಸುವ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ‘ಸ್ವಚ್ಛಭಾರತ’, ‘ಮಳೆಕೊಯ್ಲು’, ‘ನೀರಿನ ಉಳಿತಾಯ’, ‘ಹೆಣ್ಣು ಮಗುವಿನ ಶಿಕ್ಷಣ’, ‘ಪರಂಪರೆಯ ರಕ್ಷಣೆ’ ಇತ್ಯಾದಿ ಕುರಿತಾದ ಸಚಿತ್ರ ಸಂದೇಶಗಳುಳ್ಳ ಫಲಕಗಳನ್ನು ಅಳವಡಿಸುವ ವಿನೂತನ ಅಭಿಯಾನಕ್ಕೆ ಕರ್ಣಾಟಕ ಬ್ಯಾಂಕ್ ಶುಕ್ರವಾರ ಚಾಲನೆ ನೀಡಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚಿಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಈ ಸಚಿತ್ರ ಫಲಕಗಳನ್ನು ವಿವಿಧ ಭಾಷೆಗಳಲ್ಲಿ ಸಾಮಾನ್ಯ ಜನತೆಗೆ ತಿಳಿಯುವಂತೆ ರಚಿಸಲಾಗಿದೆ. ಇವು ಸ್ವಚ್ಛ, ಸುಂದರ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭ ಬ್ಯಾಂಕ್‌ನ ಚೀಫ್ ಬುಸಿನೆಸ್ ಆಫೀಸರ್ ಗೋಕುಲ್‌ದಾಸ್ ಪೈ, ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಬಿ., ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿವಾಸ್ ದೇಶ್‌ಪಾಂಡೆ ಹಾಗೂ ಬುಲ್ಸ್ ಐ ಮೀಡಿಯಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.