ಭಾರತ್ ಪೆಟ್ರೋಲಿಯಂ ಮಾರಾಟಕ್ಕಿದೆ!
ದೇಶದ ಆರ್ಥಿಕ ವ್ಯವಸ್ಥೆಗೆ ಪ್ರಜೆಗಳ ಹಿತಾಸಕ್ತಿಗಳಿಗೆ ಮೂಲಸ್ತಂಭ ಗಳಾಗಿರುವ ಸರಕಾರಿ ಸಂಸ್ಥೆಗಳನ್ನು ಮಾರಿ ಹಾಕುವುದಕ್ಕೆ ಕೇಂದ್ರ ದಲ್ಲಿನ ಬಿಜೆಪಿ ಸರಕಾರ ತೀವ್ರ ಪ್ರಯತ್ನ ಮಾಡುತ್ತಿದೆ. ಈ ವರ್ಷಾಂತ್ಯ ಕ್ಕೆಲ್ಲಾ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಏರ್ ಇಂಡಿಯಾ (ಎಐ)ಗಳನ್ನು ಮಾರಿ ಹಾಕುತ್ತೇವೆಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ದೇಶ ಆರ್ಥಿಕ ಸಂಕ್ಷೋಭೆಯಲ್ಲಿ ಹೂತು ಹೋಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಕ್ರಮಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಕುಗ್ಗಿಸುತ್ತವೆ. ದೇಶ ಪ್ರಜೆಗಳ ಹಿತಾಸಕ್ತಿಗಳು ಪ್ರೈವೇಟ್ ಸಂಸ್ಥೆಗಳ ಲಾಭಗಳಿಗೆ ಬಲಿ ಆಗುತ್ತವೆ. ಇದು ದೇಶದ್ರೋಹದ ಕ್ರಮ.
ಮೋದಿ ಎರಡನೇ ಸಲ ಅಧಿಕಾರ ಕೈಗೊಂಡ 5 ತಿಂಗಳ ಅವಧಿಯಲ್ಲೇ ಅನೇಕ ಸರಕಾರಿ ಸಂಸ್ಥೆಗಳ ಮೇಲೆ ಏಟು ಹಾಕಿದ್ದಾರೆ. ಐಅರ್‌ಸಿಟಿಸಿನಲ್ಲಿನ ಶೇ.12.5 ವಾಟಾಗಳನ್ನು ಮಾರಿ ಹಾಕಿದರು. ಎರಡು ಪ್ರೈವೇಟ್ ಟ್ರೈನ್‌ಗಳಿಗೆ ಅನುಮತಿ ನೀಡಿದರು. ಮತ್ತೊಂದು 50 ರೈಲ್ವೆ ಮಾರ್ಗಗಳಲ್ಲಿ ಪ್ರೈವೇಟು ಟ್ರೈನ್‌ಗಳಿಗೆ ಅನುಮತಿ ನೀಡಬೇಕೆಂದು ತೀರ್ಮಾನಿಸಿದ್ದಾರೆ. ರೈಲ್‌ಟೆಲ್‌ಗಳಲ್ಲಿ ಶೇ.10 ವಾಟಾಗಳನ್ನು ಮಾರಿ ಹಾಕುವುದಕ್ಕೆ ಕ್ರಮಗಳ ತೆಗೆದುಕೊಳ್ಳುತ್ತಿದ್ದಾರೆ. ಹಾಗೇ ಶಿಷ್ಟಿಂಗ್ ಕಾರ್ಪೋರೇಶನ್‌ನಲ್ಲಿ ಶೇ.63, ಕಾಂಕರ್‌ನಲ್ಲಿ ಶೇ.30 ನಿಪ್‌ಕೋಲ್ ಶೇ.100 ಹೀಗೆ 43 ಸರಕಾರಿ ಸಂಸ್ಥೆಗಳನ್ನು ಬಡಾ ಕಾರ್ಪೊರೇಟ್ ಸಂಸ್ಥೆಗಳಿಗೆ ಕಟ್ಟಿ ಬಿಡಬೇಕೆಂದು ತೀರ್ಮಾನಿಸಿದ್ದಾರೆ.
ಇತ್ತೀಚೆಗಷ್ಟೆ ಲಕ್ನೊ, ಅಹ್ಮದಾಬಾದ್, ತಿರುವನಂತಪುರಂ, ಜೈಪುರ್, ಗುವಾಹಟಿ, ಮಂಗಳೂರ್‌ನಂತಹ ಆರು ಏರ್‌ಪೋರ್ಟ್‌ಗಳನ್ನು ಸರಕಾರಿ- ಪ್ರೈವೇಟ್ ಪಾಲುದಾರಿಕೆ ಹೆಸರಲ್ಲಿ ಅದಾನಿ ಸಂಸ್ಥೆಗೆ ಧಾರೆ ಎರೆದಿದ್ದಾರೆ. ನಷ್ಟಗಳಾಗುತ್ತಿವೆ ಎಂಬ ನೆಪದಿಂದ ಈಗ ಒಮ್ಮೆಲೇ ಏರ್ ಇಂಡಿಯಾದಲ್ಲಿನ ಶೇ.75 ವಾಟಾಗಳನ್ನು ಯುದ್ಧೋಪಾದಿಯಲ್ಲಿ ಮಾರಿ ಹಾಕುವುದಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರಕಾರ ಕುತಂತ್ರದಿಂದಲೇ ಏರ್ ಇಂಡಿಯಾ ಕೈಯಲ್ಲಿ ಸಾಲಗಳನ್ನು ಮಾಡಿಸಿ ಹೊಸ ವಿಮಾನಗಳ ಕೊಳ್ಳಿಸಿತು. ಇದರೊಂದಿಗೆ ಆ ಸಂಸ್ಥೆ 58,000 ಕೋಟಿ ರೂ.ಸಾಲದಲ್ಲಿ ಮುಳುಗಿ ಹೋಯಿತು. ಸಾವಿರ ಕೋಟಿ ಲಾಭ ಪಡೆಯುತ್ತಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ನ ಸಹ ಮಾರಾಟಕ್ಕಿಟ್ಟಿ ದ್ದಾರೆ.
ಬಿಪಿಸಿಎಲ್ ದೇಶದಲ್ಲಿ ಪ್ರತಿಷ್ಠಿತ ವಾದ ಆಯಿಲ್ ಕಂಪೆನಿ. ಇದರ ಪ್ರಸ್ತುತ ಆಸ್ತಿಗಳ ಬೆಲೆ ಸುಮಾರು 2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿಯೇ ಇರುತ್ತದೆ. 38.3 ಮಿಲಿಯನ್ ಟನ್‌ಗಳ ಸಾಮರ್ಥ್ಯ ಹೊಂದಿದೆ.ಮತ್ತೊಂದು 48,000 ಕೋಟಿ ರೂ. ವೌಲ್ಯ ಉಳ್ಳ 6 ಮಿಲಿಯನ್ ಟನ್‌ಗಳ ವಿಸ್ತರಣ ಪ್ರಾಜೆಕ್ಟ್‌ಗಳು ದೇಶದಲ್ಲಿ ಜರುಗುತ್ತಿವೆ.ಕಳೆದ ವರ್ಷ 3.39 ಲಕ್ಷ ಕೋಟಿ ರೂ. ಟರ್ನೊವರ್ ಸಾಧಿಸಿತು. ಮುಂಬೈ, ಕೊಚ್ಚಿ, ಸುಮಲೀಗರ್ (ಅಸ್ಸಾಂ), ಬೀನಾಗಳಲ್ಲಿ ಆಯಿಲ್ ರಿಫೈನ್ ಕಂಪೆನಿಗಳಿವೆ. 77 ಕಡೆಗಳಲ್ಲಿ ಭಾರೀ ಆಯಿಲ್ ಸ್ಟೋರೇಜ್ ಡಿಪೋಗಳಿವೆ. 55 ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್ಸ್ 2,241 ಕಿ.ಮೀ.ಗಳ ಉದ್ದ ಇರುವ ಆಯಿಲ್ ಪೈಪ್‌ಲೈನ್, 56 ಕಡೆಗಳಲ್ಲಿ ವಿಮಾನ ಇಂಧನ ಸರಬರಾಜು ಸ್ಟೇಷನ್, ನಾಲ್ಕು ಲೂಬ್ರಿಕೆಂಟ್ ಪ್ಲಾಂಟ್ಸ್ ಮೇಜರ್ ಫೋರ್ಟ್‌ಗಳಲ್ಲಿ ಆಯಿಲ್ ಲೋಡಿಂಗ್, ಅನ್‌ಲೋಡಿಂಗ್ ಸೌಕರ್ಯಗಳು ಹೊಂದಿವೆ. ಇವುಗಳೊಂದಿಗೆ ದೇಶ ವಿದೇಶಗಳಲ್ಲಿ 11 ಅಂಗಸಂಸ್ಥೆಗಳು, 22 ಜಾಯಿಂಟ್ ವೆಂಚರ್ ಕಂಪೆನಿಗಳು, ಮತ್ತೆ ಕೆಲವು ಕಂಪೆನಿಗಳಲ್ಲಿ ವಾಟಾಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ದೇಶದಲ್ಲಿನ ಅನೇಕ ಮೆಟ್ರೊಗೆ ಪಾಲಟನ್ ನಗರಗಳಲ್ಲಿ ಸಾವಿರ ಕೋಟಿ ರೂ. ಬೆಲೆ ಬಾಳುವ ಭೂಮಿಗಳಿವೆ. ದೇಶದಲ್ಲಿ ಮತ್ತೊಂದು ದೊಡ್ಡ ಸರಕಾರಿ ಆಯಿಲ್ ಕಂಪೆನಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ (ಎಚ್‌ಪಿಸಿಎಲ್) ಇದು ಸಹಾ 18 ಮಿಲಿಯನ್ ಟನ್‌ಗಳ ಸಾಮರ್ಥ್ಯದೊಂದಿಗೆ 3 ಲಕ್ಷ ಕೋಟಿ ರೂ. ಟರ್ನೋವರ್‌ನೊಂದಿಗೆ, 15, 127 ಆಯಿಲ್ ರಿಟೈಲ್ ಔಟ್‌ಲೆಟ್ಸ್ ನೊಂದಿಗೆ ಅಪಾರವಾದ ಲಾಭಗಳು ಗಳಿಸುತ್ತಿದೆ. ಕಳೆದ ವರ್ಷ 11.442 ಕೋಟಿ ರೂ. ಲಾಭ ಗಳಿಸಿತು. ಬಿಪಿಸಿಎಲ್, ಎಚ್‌ಪಿಸಿಎಲ್ ಎರಡೂ ಸರಕಾರಿ ಕಂಪೆನಿಗಳಲ್ಲಿ ಸುಮಾರು 23,000 ಮಂದಿ ಪರ್ಮನೆಂಟ್, 51,000 ಮಂದಿ ಕಾಂಟ್ರಾಕ್ಟ್ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 70ರ ದಶಕದ ಆರಂಭದಲ್ಲಿ ದೇಶದಲ್ಲಿನ ಪ್ರೈವೇಟ್ ಆಯಿಲ್ ಕಂಪೆನಿಗಳಾದ ಕಾಲ್‌ಟೆಕ್ಸ್ ಎಸ್ಸಾ ಬರ್ಮಾಷೆಲ್‌ನಂತಹ ವಿದೇಶಿ ಕಂಪೆನಿಗಳನ್ನು ರಾಷ್ಟ್ರೀಯಗೊಳಿಸಿದರು. ಆನಂತರ ಸರಕಾರವೇ ಆಯಿಲ್ ಕಂಪೆನಿಗಳನ್ನು ಸ್ಥಾಪಿಸಿ, ತೈಲರಂಗದಲ್ಲಿ ಸರಕಾರದ ಏಕಸ್ವಾಮ್ಯವನ್ನು ಸ್ಥಾಪಿಸಿ ಸ್ವಯಂ ಸಮೃದ್ಧಿ ಸಾಧಿಸಿತು. ಪರಿಣಾಮ ವಾಗಿ ದೇಶ ಆರ್ಥಿಕಾಭಿವೃದ್ಧಿಗೆ, ಔದ್ಯಮೀಕರಣಕ್ಕೆ, ಪ್ರಜೆಗಳಿಗೆ ಎಷ್ಟೋ ಒಳಿತಾಯಿತು. 1,919 ಉದಾರೀಕರಣ ನೀತಿ ಬಳಿಕ ಈ ರಂಗದೊಳಗೆ ಪ್ರೈವೇಟ್, ಕಾರ್ಪೊರೇಟ್‌ಗಳಿಗೆ ರೆಡ್‌ಕಾರ್ಪೆಟ್ ಹಾಸಿದರು. ಪ್ರಮುಖವಾಗಿ ರಿಲಯನ್ಸ್ ಸಂಸ್ಥೆಗೆ ಭಾರಿಯಾಗಿ ಆಯಿಲ್ ನಿಕ್ಷೇಪಗಳನ್ನು, ಹಂಚಿಕೆ, ಮಾರ್ಕೆಟ್‌ಗಳನ್ನು ಒಪ್ಪಿಸಿದರು. ಬಿಜೆಪಿ ಅಧಿಕಾರಕ್ಕೆ ಬರುತ್ತಲೂ ರಿಲಯನ್ಸ್ ಸಂಸ್ಥೆ ಈ ರಂಗವನ್ನು ತಮ್ಮ ಮುಷ್ಟಿಯೊಳಗೆ ತೆಗೆದುಕೊಳ್ಳುವುದಕ್ಕೆ ತೀವ್ರ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್, ಬಿಜೆಪಿಗಳ ಕ್ರೋನಿ ಕ್ಯಾಪಿಟಲ್ ಕ್ರಮಗಳಿಂದ ಕಳೆದ 20 ವರ್ಷಗಳ ಅವಧಿಯಲ್ಲೇ ರಿಲಯನ್ಸ್ ಕಂಪೆನಿ 62 ಮಿಲಿಯನ್ ಟನ್‌ಗಳ ಸಾಮರ್ಥ್ಯಕ್ಕೆ ಬೆಳೆದಿದೆ. ಇಂದು ಬಿಪಿಸಿಎಲ್, ಎಚ್‌ಪಿಸಿಎಲ್‌ಗಳನ್ನು ಸಹ ಪೂರ್ತಿಯಾಗಿ ಇದಕ್ಕೆ ಒಪ್ಪಿಸಿದರೆ ದೇಶದಲ್ಲಿನ ಒಟ್ಟು ಆಯಿಲ್ ರಂಗಕ್ಕೆ ಅಂದರೆ 120 ಮಿಲಿಯನ್ ಟನ್‌ಗಳ ಸಾಮರ್ಥ್ಯಕ್ಕೆ ರಿಲಯನ್ಸ್ ಒಡೆತನ ಹೊಂದುತ್ತದೆ, ಈ ಕ್ರಮಗಳು ವೇಗ ಪಡೆಯುತ್ತಿವೆ. 2017-18ರಲ್ಲೇ ಎಚ್‌ಪಿಸಿಎಲ್‌ನಲ್ಲಿನ ತನ್ನ ಶೇ.51.11 ವಾಟಾಗಳನ್ನು ಕೇಂದ್ರ ಸರಕಾರ ರಾತ್ರೋರಾತ್ರಿ ಒಎನ್‌ಜಿಸಿಗೆ ಮಾರಿಹಾಕಿ 36,915 ಕೋಟಿ ರೂ.ಗಳನ್ನು ಸರಕಾರಿ ಖಜಾನೆಗೆ ಜಮಾ ಮಾಡಿಕೊಂಡಿದೆ. ಒನ್‌ಜಿಸಿಯಿಂದ 25,000 ಕೋಟಿಗಳು ಬಲವಂತದಿಂದ ಸಾಲಗಳ ಮಾಡಿಸಿ ಈ ಷೇರುಗಳ ಕೊಳ್ಳಿಸಿದೆ. ಲಾಭದಲ್ಲಿರುವ ಒಎನ್‌ಜಿಸಿ ಈಗ ನಷ್ಟಗಳ ಪಾಲಾಗಿದೆ. ನಷ್ಟಗಳ ಹೆಸರು ಹೇಳಿ ಇಂದು ಒಎನ್‌ಜಿಸಿಯನ್ನು ಸಹಾ ಮಾರಿಹಾಕುವುದಕ್ಕೆ ಪ್ರಯತ್ನಗಳು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ನಮ್ಮ ದೇಶದ ಆಯಿಲ್, ಗ್ಯಾಸ್‌ರಂಗಗಳನ್ನು ರಿಲಯನ್ಸ್, ಅದಾನಿ ಗ್ರೂಪ್‌ಗಳಿಗೆ ಕಟ್ಟಿಬಿಡಬೇಕು ಎಂಬ ಪಿತೂರಿಯ ಭಾಗವೇ ಈ ಕ್ರಮಗಳು. ಈ ಎರಡು ಪ್ರೈವೇಟ್ ಕಂಪೆನಿಗಳು ಬಿಪಿಸಿಎಲ್, ಎಚ್‌ಪಿಸಿಎಲ್ ಬಳಿಕ ಇನ್ನೂ ಯಾವುದರ ಸರದಿಯೋ? ಇವು ಈಗಾಗಲೇ ಅಮೆರಿಕ, ಫ್ರಾನ್ಸ್, ಕೆನಡಾ, ಸೌದಿ ಅರೇಬಿಯ ದೇಶಗಳಿಗೆ ಸೇರಿದ ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಸದ್ಯ ದೇಶದ ತೈಲ ಮಾರ್ಕೆಟ್‌ನಲ್ಲಿ ಬಿಪಿಸಿಎಲ್, ಐಒಸಿ, ಒಎಂಸಿಎಸ್, ಎಚ್‌ಪಿಸಿಎಲ್ ಕಂಪೆನಿಗಳ ವಾಟಾ ಶೇ.75 ಇದೆ. ಇವೆಲ್ಲಾ ಖಾಸಗೀಕರಣ ಗೊಂಡರೆ ಭಾರತೀಯ ಹಿತಾಸಕ್ತಿಗಳು ತೀವ್ರವಾಗಿ ಘಾಸಿ ಗೊಳ್ಳುತ್ತವೆ. ಏಕೆಂದರೆ ತೈಲ, ಗ್ಯಾಸ್ ರಂಗಗಳಲ್ಲಿ ಸರಕಾರಿ ಸಂಸ್ಥೆಗಳ ಗುತ್ತಾಧಿಪತ್ಯ ಇರುವುದರಿಂದ ಪೆಟ್ರೋ ಗ್ಯಾಸ್ ಬೆಲೆಗಳ ಮೇಲೆ ನಿಯಂತ್ರಣ ಮುಂದುವರಿಯುತ್ತಿದೆ. ಪ್ರಜೆಗಳಿಗೆ ಕಂಪೆನಿಗಳಿಗೆ ಸರಕಾರ ಸಬ್ಸಿಡಿ ಸಹಾ ನೀಡುತ್ತಿದೆ. ಸಾವಿರಾರು ಕೋಟಿ ರೂ.ಗಳೊಂದಿಗೆ ಅವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿವೆ. ಎಲ್ಲಕ್ಕೂ ಮೀರಿ ಆಯಿಲ್ ಆ್ಯಂಡ್ ಗ್ಯಾಸ್ ರಂಗ ವ್ಯೆಹಾತ್ಮಕವಾದುದು. ದೇಶದ ಭದ್ರತೆಗೆ ಬಹಳ ಮುಖ್ಯವಾದುದು. ಅತ್ಯಂತ ಪ್ರಾಧಾನ್ಯತೆ ಉಳ್ಳ ಈ ರಂಗವೆಲ್ಲಾ ಖಾಸಗಿ ಕಾರ್ಪೊರೇಟ್‌ಗಳ ಕೈಗಳಿಗೆ ಹೋದರೆ, ದೇಶದ ರಕ್ಷಣೆಗೆ 130 ಕೋಟಿಗಳಿಗೂ ಹೆಚ್ಚಿನ ಪ್ರಜೆಗಳ ಹಿತಾಸಕ್ತಿಗಳಿಗೆ, ದೇಶದ ಅರ್ಥ ವ್ಯವಸ್ಥೆಗೆ ಭಾರೀ ಅಪಾಯ ಎದುರಾಗುತ್ತದೆ. ಭಾರತ ಪರಾಧೀನವಾಗುತ್ತದೆ.
ಮೂಲ: ಡಾ.ಬಿ. ಗಂಗಾರಾವ್ (ಕೃಪೆ: ಆಂಧ್ರ ಜ್ಯೋತಿ)