ಮಂಗಳೂರು: 'ಆಗ್ನೇಷಿಯನ್ ಸೆಂಟಿನರಿ ರನ್'
ಮಂಗಳೂರು, ಡಿ.15: ನಗರದ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ವರ್ಷಾಚರಣೆಯ ಪೂರ್ವಭಾವಿಯಾಗಿ ಸೈಕ್ಲೋಥಾನ್, ಮ್ಯಾರಥಾನ್, ವಾಕಥಾನ್‌ಗಳನ್ನೊಳಗೊಂಡ ಆಗ್ನೇಷಿಯನ್ ಸೆಂಟಿನರಿ ರನ್ ರವಿವಾರ ನಡೆಯಿತು.
ಕಾಲೇಜಿನಿಂದ ಬೆಂದೂರ್‌ವೆಲ್, ಬಾಲ್ಮಟ್ಟಾ, ಜ್ಯೋತಿಯಿಂದ 3.5 ಕಿ.ಮೀನಷ್ಟು ದೂರ ಸಾಗಿದ ಸೆಂಟಿನರಿ ರನ್‌ನಲ್ಲಿ ಸುಮಾರು 1,500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಸಿಸ್ಟರ್ ಡಾ.ಜೆಸ್ವಿನಾ ಎಸಿ, ಎಂ.ಎಸ್. ರೋಚೆಲ್ ಡಿಸಿಲ್ವಾ ಮತ್ತು ಜಿಯಾನೆಟ್ ಅವರು ಬಲೂನ್ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ರೋಚೆಲ್ ಡಿಸಿಲ್ವಾ ಸೈಕ್ಲೋಥಾನ್‌ಗೆ, ಡಾ. ಜೆಸ್ವಿನಾ ಎಸಿ ಮ್ಯಾರಥಾನ್, ಎಂ.ಎಸ್. ಜಿಯಾನೆಟ್ ವಾಕಥಾನ್‌ಗೆ ಪತಾಕೆ ಹಾರಿಸಿ ಚಾಲನೆ ನೀಡಿದರು.
ಸೇಂಟ್ ಆಗ್ನೇಸ್ ಕಾಲೇಜಿನ ಯುಜಿ ಅಧ್ಯಕ್ಷ ಜೆರುಷಾ, ಕಾಲೇಜಿನ ಹಳೆಯ ವಿದ್ಯಾರ್ಥಿ ಜಿಯಾನೆಟ್ ಡಿಸೋಜ, ಪಿಯು ವಿಭಾಗದ ಪ್ರಾಂಶುಪಾಲ ನೊರಿನ್, ಸಂಸ್ಥೆಗಳ ಸುಪೀರಿಯರ್ ಸಿಸ್ಟರ್ ಮರಿಯಾ ರೂಪಾ ಎ.ಸಿ., ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ಜೆಸ್ವಿನಾ ಎ.ಸಿ, ಕಾಲೇಜಿನ ಆಡಳಿತಾಧಿಕಾರಿ ಎಸ್.ಆರ್. ಕಾರ್ಮೆಲ್ ರೀಟಾ ಎಸಿ, ಪಿಜಿ ಅಧ್ಯಕ್ಷ ಎಂ.ಎಸ್. ಅನ್ನಾ ಕ್ರಾಸ್ಟಾ ಮತ್ತು ಪಿಟಿಎ ಅಧ್ಯಕ್ಷ ರೊನಾಲ್ಡ್ ಡಿಸೊಜ ಉಪಸ್ಥಿತರಿದ್ದರು.
ಬಹುಮಾನ ವಿಜೇತರು: ಸೈಕ್ಲೋಥಾನ್‌ನಲ್ಲಿ ಕಿರಣ್ ಕುಮಾರ್ (ಪ್ರ), ನಿತಿನ್ ಮೋಹನ್ (ದ್ವಿ), ವಿನಯಾ ಭಟ್ (ತೃ), ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಅಜುಮಾನ್ (ಪ್ರ), ಶಿವಾನಂದ ಬಿ. (ದ್ವಿ), ಲಾರಾ ಫ್ರಾನ್ಸಿಸ್ ಮ್ಯಾರಿ (ತೃ), ಮಹಿಳೆಯರ ವಿಭಾಗದಲ್ಲಿ ಎಂ.ಎಸ್. ಸೋನಿಯಾ (ಪ್ರ), ಎಂ.ಎಸ್. ದೀಕ್ಷಾ (ದ್ವಿ), ಎಂ.ಎಸ್. ಮಾರಿಯಾ ಲವಿನಾ ರೊಡ್ರಿಗಸ್(ತೃ), ಬಹುಮಾನ ಪಡೆದರು. ಎಂ.ಎಸ್. ಅನ್ನಾ ಕ್ರಾಸ್ಟಾ ಕುಟುಂಬಕ್ಕೆ ಗರಿಷ್ಠ ಸಂಖ್ಯೆಯ ಭಾಗವಹಿಸುವಿಕೆಗಾಗಿ ಸಸಿ ವಿತರಿಸಲಾಯಿತು.
ಟಿವಿಎಸ್, ಕೆಎಂಸಿ ಆಸ್ಪತ್ರೆ ಮತ್ತು ಅಮೆರಿಕದ ಚಿಕಾಗೋದ ಡಾ.ಆಸ್ಟಿನ್ ಡಿಸೋಜ ಪ್ರಭು ಕಾರ್ಯಕ್ರಮ ಪ್ರಾಯೋಜಿಸಿದರು. ಎಂ.ಎಸ್. ಅನ್ನಾ ಕ್ರಾಸ್ಟಾ ವಂದಿಸಿದರು. ಎಂ.ಎಸ್. ನೆರಿಸ್ಸಾ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು.