ಘಟಿಕೋತ್ಸವದ ವೇದಿಕೆಯಲ್ಲಿ ಸಿಎಎ ಪ್ರತಿ ಹರಿದು 'ಇಂಕ್ವಿಲಾಬ್' ಘೋಷಣೆ ಕೂಗಿದ ವಿದ್ಯಾರ್ಥಿನಿ
ವಿಡಿಯೋ ವೈರಲ್
ಹೊಸದಿಲ್ಲಿ: ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ವೇದಿಕೆಯಲ್ಲೇ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದ ವಿದ್ಯಾರ್ಥಿನಿಯೊಬ್ಬರು 'ಇಂಕ್ವಿಲಾಬ್ ಝಿಂದಾಬಾದ್' ಘೋಷಣೆ ಕೂಗಿದ ಘಟನೆ ಜಾಧವ್ ಪುರ ವಿವಿಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ದೇಬ್ ಸ್ಮಿತಾ ಚೌಧರಿ ಪದವಿ ಪ್ರದಾನದ ವೇಳೆ ವೇದಿಕೆಗೆ ಆಗಮಿಸಿ ಪ್ರಮಾಣಪತ್ರ ಮತ್ತು ಚಿನ್ನದ ಪದಕವನ್ನು ಸ್ವೀಕರಿಸುತ್ತಾರೆ. ನಂತರ ವೇದಿಕೆಯಲ್ಲೇ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು 'ಇಂಕ್ವಿಲಾಬ್ ಝಿಂದಾಬಾದ್' ಎಂದು ಘೋಷಣೆ ಕೂಗುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
Next Story