ನೌಕಾಪಡೆಯ ಮೊದಲ ಮಹಿಳಾ ಪೈಲೆಟ್
ಆಗಸದಲ್ಲಿ ಹಾರುವ ಆಸೆ ಪಟ್ಟವಳು ಆ ಹತ್ತರ ಬಾಲೆ. ಇಂದು ಆಗಸದಲ್ಲಿ ನೂರು ವರ್ಷಗಳ ಕಾಲ ಹಾರಟ ನಡೆಸಿ ಇಡೀ ದೇಶವೆ ತನ್ನತ್ತ ತಿರುಗಿ ನೋಡುವ ಹಾಗೇ ಮಾಡಿದ ಛಲ ಬೀಡದ ಧೀರ ಮಹಿಳೆ. ಸದಾಕಾಲ ಆಗಸದತ್ತ ಮುಖ ಮಾಡಿ ನಾನು ಮುಂದೊಂದು ದಿನ ಪೈಲೆಟ್ ಆಗಬೇಕು ಅಂದುಕೊಂಡ ಅವಳನ್ನು ಸದಾಕಾಲ ಸೆಳೆಯುತ್ತಿದ್ದ ಒಂದು ವಸ್ತುವೇ ವಿಮಾನ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬ ಮಾತಿಗೆ ಹಿಡಿದ ಕನ್ನಡಿಯೇ ಇವರು. ವಿಮಾನ ಹಾರಿಸುವ ಕನಸು ಕಂಡಾಕೇ ಇಂದು ದೇಶದ ಪ್ರಮುಖ ಭಾಗವೇ ಆಗಿದ್ದಾರೆ.
ನಮ್ಮ ಭಾರತೀಯ ಹೆಮ್ಮೆಯ ನೌಕಾಪಡೆಯ ಮೊದಲ ಮಹಿಳಾ ಪೈಲೆಟ್ ಆಗಿ ನೇಮಕಗೊಂಡವರೇ ಸುಭಾಂಗಿ ಸ್ವರೂಪ್. ಮೂಲತಃ ಬಿಹಾರದ ಮುಝಪ್ಫರ್‌ಪುರದವರಾದ ಇವರು ವೆಲ್ಲೋರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಯೋಟೆಕ್ನಾಲಜಿ ಇಂಜಿನಿಯರ್ ಪದವಿ ಹೊಂದಿದ್ದು ಇದೀಗ ನಮ್ಮ ಸೇನೆಯ ಮುಖ್ಯ ಸ್ಥಾನದಲ್ಲಿದ್ದಾರೆ. ಸೇನೆ ಎಂದರೆ ಕೇವಲ ಪುರುಷರಿಗೆ ಎಂಬ ಮಾತು ಇಂದು ಹಳೆಯದಾಗುತ್ತ ಬರುತ್ತಿದೆ. ದೇಶದ ಗಡಿಯಲ್ಲಿ ಬಂದೂಕು ಹಿಡಿದು, ಪ್ರಮುಖ ಹೆಲಿಕ್ಯಾಪ್ಟರ್ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಇಂದು ಮಹಿಳೆಯರೆ ಮುನ್ನಡೆಸುತ್ತಿದ್ದಾರೆ.
ಸುಭಾಂಗಿ ಅವರ ಮನೆಯಲ್ಲಿ ಸದಾಕಾಲ ದೇಶಭಕ್ತಿಯೇ ತುಂಬಿರುತ್ತಿತ್ತು. ಕಾರಣ, ತಂದೆ ನೇವಲ್ ಕಮಾಂಡರ್ ಗ್ಯಾನ ಸ್ವರೂಪ್ ಮತ್ತು ತಾಯಿ ಕಲ್ಪನಾ ಸ್ವರೂಪ್.
ಮಗಳ ಆಸೆಗೆ ಎಂದೂ ಅಡ್ಡಿ ಮಾಡದೆ ಅವಳ ಆಸೆಯಂತೆ ಬೆನ್ನೆಲುಬಾಗಿ ನಿಂತವರು ಅವರ ಹೆತ್ತವರು. ಸೇನೆಯ ಹಲವು ಪರಿಕ್ಷೆಗಳಲ್ಲಿ ಫೇಲಾದರೂ ಧೃತಿಗೆಡದ ಇವರು ಮತ್ತೆ ತಮ್ಮ ಮಗಳ ಕನಸಿಗೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಮುಂದೊಂದು ದಿನ ನಾನು ಆಗಸದೆತ್ತರ ಹಾರುತ್ತೇನೆ ನೋಡುತ್ತಿರು ಅಮ್ಮ ಎನ್ನುತ್ತಿದ್ದರಂತೆ.
2018 ರಲ್ಲಿ ಸಿಕ್ಕ ಸೇನೆಯ ಪರೀಕ್ಷೆಯ ಅವಕಾಶ ಸದುಪಯೋಗ ಪಡಿಸಿಕೊಂಡ ಇವರು ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ನೇವಲ್ ತರಬೇತಿ ಅಕಾಡಮಿಯಲ್ಲಿ ತರಬೇತಿ ಪೂರ್ಣಗೊಳಿಸಿ
2019ರ ಡಿಸೆಂಬರ್‌ನಲ್ಲಿ ಸೇನೆಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೇರಳದ ಕಣ್ಣೂರಿನಲ್ಲಿನ ಮಹಿಳಾ ತರಬೇತಿ ಅವಧಿ ಮೊದಲ ಬ್ಯಾಚ್‌ನ ಮಹಿಳೆ ಇವರಾಗಿದ್ದು ಭಾರತೀಯ ನೌಕಾಪಡೆಯ ವಿಮಾನಗಳನ್ನು ಮುನ್ನಡೆಸಲಿದ್ದಾರೆ. ಇಲ್ಲಿಯ ತನಕ ಕೇವಲ ಸಿನೆಮಾದಲ್ಲಿ ನಾವು ಮಹಿಳೆಯರು ಯುದ್ಧದಲ್ಲಿ ಭಾಗವಹಿಸಿವುದು, ಅತ್ಯಾಧುನಿಕ ಶಶ್ತ್ರಾಸ್ರ್ತ ಬಳಸುತ್ತಿದ್ದುದು, ವಿಮಾನ ಹಾರಿಸುತ್ತಿದ್ದುದು ನೋಡಿದ್ದೇವೆ. ಇಂದು ಭಾರತೀಯ ಮಹಿಳೆಯರು ನಿಜ ಜೀವನದಲ್ಲಿಯೇ ಅದನ್ನು ಸಾಧಿಸಿ ತೋರಿಸಿದ್ದಾರೆ. ಇದಕ್ಕೆ ಅಲ್ಲವೇ ಮಹಿಳಾ ಕ್ತಿಯ ಮುಂದೆ ಮತ್ಯಾವ ಶಕ್ತಿ ಇಲ್ಲ ಎಂದಿರುವುದು.