ಎಲ್‌ಕೆಜಿ, ಯುಕೆಜಿ ಆರಂಭ ಎಂದು..?
ಮಾನ್ಯರೇ,
ಕರ್ನಾಟಕ ರಾಜ್ಯದಲ್ಲಿರುವ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಬೇಕೆಂಬುದು ಬಹಳ ವರ್ಷಗಳ ಬೇಡಿಕೆ. ಈ ಹಿನ್ನೆಲೆಯಲ್ಲಿ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ. ಈ ತರಗತಿ ಆರಂಭಿಸುವುದಕ್ಕೆ ಬಹಳ ಬೇಡಿಕೆ ಇದೆ ಎಂದು ಈ ಹಿಂದೆ ಸರಕಾರವೇ ಹೇಳಿತ್ತು. ಎಲ್‌ಕೆಜಿ, ಯುಕೆಜಿ ತರಗತಿಗಳು ಈಗ ಹೆಚ್ಚಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ನಡೆಯುತ್ತವೆ. ಉಳ್ಳವರು ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರು ಏನು ಮಾಡಬೇಕು..? ಶಾಲಾ ಪೂರ್ವ ತರಗತಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬುದು ಬಡ ಕುಟುಂಬದ ಹೆತ್ತವರಲ್ಲಿ ಆಸೆ ಕೂಡಾ ಇರುತ್ತದೆ. ಹೀಗಾಗಿ ಆದಷ್ಟು ಬೇಗನೇ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಹಸಿರು ನಿಶಾನೆ ತೋರಿಸಬೇಕಾಗಿದೆ. ಇದರಿಂದ ಇತರ ಸರಕಾರಿ ಶಾಲೆಗೆ ಯಾವುದೇ ಧಕ್ಕೆಯಾಗದು. ಇಂತಹ ವಿತಂಡವಾದಕ್ಕೆ ತಿಲಾಂಜಲಿ ಇಟ್ಟು ಬಡಮಕ್ಕಳ ಹಿತದೃಷ್ಟಿಯಿಂದ ಈ ತರಗತಿಗಳ ಆರಂಭಿಸಬೇಕಾಗಿದೆ. ಈ ಮೂಲಕ ಸರಕಾರಿ ಶೈಕ್ಷಣಿಕ ಸವಲತ್ತುಗಳು ಬಡಮಕ್ಕಳ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಸಿಗುವಂತೆ ಅವಕಾಶ ಕಲ್ಪಿಸಬೇಕಾಗಿದೆ.