ಮಂದಾರ್ತಿ: ಮದ್ಯ ಮಾರಾಟ ನಿಷೇಧ
ಉಡುಪಿ, ಫೆ.12: ಮಂದಾರ್ತಿ ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.13ರಿಂದ 15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ, ಹೆಗ್ಗುಂಜೆ ಗ್ರಾಮ ಹಾಗೂ 33ನೇ ಶಿರೂರು ಗ್ರಾಮದ ವ್ಯಾಪ್ತಿ ಯೊಳಗಿನ ಪ್ರದೇಶದಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ರೆಸ್ಟೋರೆಂಟ್, ವೈನ್ಶಾಪ್ಗಳ ಮದ್ಯ ಮಾರಾಟವನ್ನು ಫೆ.13ರ ಸಂಜೆ 6ರಿಂದ ಫೆ.15ರ ರಾತ್ರಿ 12 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
Next Story