varthabharthi


ಈ ದಿನ

ಕ್ಯೂಬಾದ ಪ್ರಧಾನಮಂತ್ರಿಯಾಗಿ ಫಿಡೆಲ್ ಕ್ಯಾಸ್ಟ್ರೋ ಪ್ರಮಾಣ ವಚನ

ವಾರ್ತಾ ಭಾರತಿ : 16 Feb, 2020

1846: ನಿರ್ಣಾಯಕ ಸೊಬ್ರಾಂವ್ ಕದನದಲ್ಲಿ ಸಿಖ್ ಸೈನ್ಯವು ಬ್ರಿಟಿಷರಿಗೆ ಸೋಲುವ ಮೂಲಕ ಪ್ರಥಮ ಆಂಗ್ಲೊ-ಸಿಖ್ ಯುದ್ಧ ಅಂತ್ಯ ಕಂಡಿತು.

1918: ಲಿಥುವೇನಿಯಾ ಸ್ವಾತಂತ್ರಗೊಂಡಿತು.

1927: ಟರ್ಕಿ ಜೊತೆ ಕಡಿದುಕೊಂಡಿದ್ದ ರಾಜತಾಂತ್ರಿಕ ಸಂಬಂಧಗಳನ್ನು ಅಮೆರಿಕ ಪುನಾರಂಭಿಸಿತು.

1932: ವಿಶ್ವದಲ್ಲಿ ಪ್ರಥಮ ಬಾರಿಗೆ ಮರದ ಹಕ್ಕುಸ್ವಾಮ್ಯವನ್ನು ಅಮೆರಿಕದ ಮಾರ್ಕಮ್‌ಗೆ ನೀಡಲಾಯಿತು.

1945: ನಾಝಿ ಆಳ್ವಿಕೆಯ ಜರ್ಮನಿಯ ವಿರುದ್ಧ ವೆನಿಝುವೆಲಾ ಯುದ್ಧ ಘೋಷಿಸಿತು.

1959: ಕ್ಯೂಬಾದ ಪ್ರಧಾನಮಂತ್ರಿಯಾಗಿ ಕ್ರಾಂತಿಕಾರಿ, ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಪ್ರಮಾಣ ವಚನ ಸ್ವೀಕರಿಸಿದರು. ಗೆರಿಲ್ಲಾ ಯುದ್ಧತಂತ್ರದ ಮೂಲಕ ಫಲ್ಗೆನ್ಸಿಯೊ ಬ್ಯಾಟಿಸ್ಟಾನ ಆಳ್ವಿಕೆಯನ್ನು ಕೊನೆಗಾಣಿಸಿ ಅಧಿಕಾರದ ಚುಕ್ಕಾಣಿ ಹಿಡಿದರು. ಕ್ಯಾಸ್ಟ್ರೋ ಕ್ಯೂಬಾದ ನಾಯಕತ್ವ ವಹಿಸಿದ 2 ವರ್ಷಗಳಲ್ಲಿ ಸಾಮ್ರಾಜ್ಯಶಾಹಿ ಅಮೆರಿಕ ಕ್ಯೂಬಾದಲ್ಲಿದ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿತು.

1994: ಇಂಡೋನೇಶ್ಯದ ಆಗ್ನೇಯ ಸುಮಾತ್ರಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 200 ಜನರು ಬಲಿಯಾದರು.

2005: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಕುರಿತಾದ ಕ್ಯೊಟೊ ಪ್ರೊಟೊಕಾಲ್‌ಗೆ ರಶ್ಯ ಅನುಮೋದನೆ ನೀಡುವ ಮೂಲಕ ಪ್ರೊಟೊಕಾಲ್ ಜಾರಿಗೆ ಬಂದಿತು.

1944: ಭಾರತೀಯ ಸಿನೆಮಾ ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ಚಿತ್ರ ನಿರ್ದೇಶಕ, ಚಿತ್ರಕಥೆಗಾರ ದಾದಾಸಾಹೇಬ್ ಫಾಲ್ಕೆ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)