ಸಂವಿಧಾನ ಮತ್ತು ಮಹಿಳೆ
ಡಾ. ಬಿ.ಆರ್. ಅಂಬೇಡ್ಕರ್ ರವರು ಮಹಿಳೆಯರಿಗೆ ನೀಡಿದ ಕೊಡುಗೆಗಳು
1950, ಜನವರಿ 26 ರಂದು ನಮ್ಮ ದೇಶಕ್ಕೆ ಸಂವಿಧಾನ ಜಾರಿಗೆ ಬಂತು. ಅವತ್ತಿನಿಂದ ಮಹಿಳೆಯರ ಸ್ಥಿತಿಗಳನ್ನು, ದೌರ್ಜನ್ಯಗಳನ್ನು, ಶೋಷಣೆಗಳನ್ನು ಕಡಿಮೆ ಮಾಡಲು ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನವಾಗಿ ಬದುಕಲು, ಶಿಕ್ಷಣ ಪಡೆಯಲು ಐಎಎಸ್, ಕೆಎಎಸ್ ನೌಕರಿಯನ್ನು ಪಡೆಯಲು, ಡಾಕ್ಟರ್, ಇಂಜಿನಿಯರಿಂಗ್, ಪೈಲೆಟ್, ಎಂಎಲ್‌ಎ, ಎಂಪಿ, ಡಿಸಿ, ಎಸಿ, ಆಗಲು ಡಾ. ಬಿ.ಆರ್. ಅಂಬೇಡ್ಕರ್‌ರ ಸಂವಿಧಾನ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದರಿಂದಾಗಿ ನಮ್ಮ ದೇಶದ ಮಹಿಳೆಯರೂ ಜಗತ್ಪ್ರಸಿದ್ಧರಾಗಲು ಸಾಧ್ಯವಾಯಿತು. ತಂದೆ ಆಸ್ತಿಯಲ್ಲಿ ಆಸ್ತಿಯ ಹಕ್ಕು, ಹಿಂದೂ ಕೋಡ್ ಬಿಲ್ಲು ಜಾರಿ ಮಾಡಿಲ್ಲ ಎಂದು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿದ ತ್ಯಾಗಜೀವಿ ಎಂದರೆ ಅದು ಡಾ. ಬಿ.ಆರ್. ಅಂಬೇಡ್ಕರ್ ಮಾತ್ರ. ಮಹಿಳೆಯರನ್ನು ಅವಮಾನ ಮಾಡುವ ಅಥವಾ ಮಾನವ ಜಗತ್ತಿಗೆ ವಿರುದ್ಧವಾದಂತಹ ಮನಸ್ಮತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿದರು. ಎಲ್ಲ ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು, ಮತದಾನದ ಹಕ್ಕು, ಆಸ್ತಿಯ ಹಕ್ಕು, ಕೈಗಾರಿಕೆಯಲ್ಲಿ ದುಡಿಯುವಾಗ ರಜೆಯ ಹಕ್ಕು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಟ್ಟ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ.
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರು
ಭಾರತ ದೇಶದ ಕಟು ಸಾಮಾಜಿಕ ವಾಸ್ತವ ಅನುಭವಕ್ಕೆ ಬರುವುದು ಇಲ್ಲಿನ ವಂಚಿತ ಸಮುದಾಯಿಗಳಿಗೆ ಮಾತ್ರ. ಕಾರಣ ಒಂದು ಜಾತಿ, ಮತ್ತೊಂದು ಅಸ್ಪಶ್ಯತೆ. ತಳಸಮುದಾಯಗಳಿಗೆ ಅಸ್ಪಶ್ಯತೆ ಹುಟ್ಟಿನಿಂದಲೇ ಒದಗಿದರೆ, ಲಿಂಗದ ಕಾರಣವಾಗಿ ಪ್ರತೀ ಜಾತಿ, ವರ್ಗದ ಹೆಣ್ಣು ಎರಡನೇ ದರ್ಜೆಯ ಪ್ರಜೆಯಾಗಿಯೇ ಮುಂದುವರಿದಿದ್ದಾಳೆ. ಆದರೆ ನಮ್ಮ ಸಂವಿಧಾನವು ಸ್ತ್ರೀ ಪುರುಷರೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿತು. ಸಂವಿಧಾನದ ರಚನಾ ಸಭೆಯಲ್ಲಿ 15 ಮಂದಿ ಮಹಿಳೆಯರೂ ಇದ್ದರು. ಕೇಂದ್ರ ಪ್ರಾಂತ ಶಾಸನಸಭೆಗಳಿಗೆ ಚುನಾಯಿತರಾದ 272 ಜನಪ್ರತಿನಿಧಿಗಳು ಸಂವಿಧಾನ ರಚನಾಸಭೆಗೆ ಆಯ್ಕೆಯಾದರೆ ಅದರಲ್ಲಿ 15 ಜನ ಮಹಿಳೆಯರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯರು, ಸಾಮಾಜಿಕ ಕಾರ್ಯಕರ್ತೆಯರು, ವಕೀಲೆಯರಿದ್ದರು. ಇವರು ಸಂವಿಧಾನ ಅಂಗೀಕರಿಸುವ ಚರ್ಚೆಗಳಲ್ಲಿ ಹಾಗೂ ಸಮಿತಿಗಳಲ್ಲಿ ಪಾಲ್ಗೊಂಡಿದ್ದರು.
ಅವರಲ್ಲಿ...
♦ ಅಮ್ಮು ಸ್ವಾಮಿನಾಥನ್: ಮದರಾಸು-ಮೂಲಭೂತ ಹಕ್ಕುಗಳು ನಿರ್ದೇಶಕ ತತ್ವಗಳ ಸಮಿತಿ.
♦ ಬೇಗಂ ಇಝಾಜ್ ರಸೂಲ್: ಯುನೈಟೆಡ್ ಪ್ರಾವಿನ್ಸ್-ಪ್ರತ್ಯೇಕ ಮತಕ್ಷೇತ್ರ ಮೀಸಲಾತಿ ಸಮಿತಿ.
♦ ದಾಕ್ಷಾಯಿಣಿ ವೇಲಾಯುಧನ್: ಮದರಾಸು -ಅಂಬೇಡ್ಕರ್‌ಗೊಂದು ಮನವಿ, ಹರಿಜನ ಜೀತಮುಕ್ತಿ, ಹರಿಜನರಿಗೆ ಮೀಸಲಾತಿ, ಪ್ರತ್ಯೇಕ ಮತಕ್ಷೇತ್ರ ಕರಡು ಸಂವಿಧಾನ ಅಸ್ಪಶ್ಯತೆಯ ವಿರುದ್ಧ ಹೋರಾಟ ಸಮಿತಿ.
♦ ಆ್ಯನಿಮಸ್ಕರೇನ್: ತಿರುವಾಂಕೂರು, ಕೊಚಿನ್ ಯೂನಿಯನ್ - ಪ್ರಾಂತೀಯ ಚುನಾವಣೆ, ರಕ್ತರಹಿತವಾಗಿ ಭಾರತ ಗಣರಾಜ್ಯದೊಳಗೆ ಸಂಸ್ಥಾನಗಳ ವಿಲೀನ ಸಮಿತಿ.
♦ ದುರ್ಗಾಬಾಯಿ ದೇಶಮುಖ್: ಮದರಾಸು-ದೇವದಾಸಿ ಪದ್ಧತಿ ರದ್ದತಿ, ಸರ್ವರಿಗೂ ಮುಕ್ತಶಿಕ್ಷಣ, ಮಕ್ಕಳ ತರುಣರ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಹೇರಿದ ಮಿತಿ ಸಮಿತಿ.
♦ ಹನ್ಸ್ ಜೀವರಾಜ ಮಹ್ತ್: ಮುಂಬೈ
♦ ಕಮಲಾ ಚೌಧುರಿ: ಯುನೈಟೆಡ್ ಪ್ರಾಯಿನ್ಸ್
♦ ಲೀಲಾ ರಾಮ್: ಪಶ್ಚಿಮ ಬಂಗಾಳ
♦ ಮಾಲತಿ ಚೌಧರಿ: ಒಡಿಶಾ
♦ ಪೂರ್ಣಿಮಾ ಬ್ಯಾನರ್ಜಿ: ಯುನೈಟೆಡ್ ಪ್ರಾವಿನ್ಸ್
♦ ರಾಜಕುಮಾರಿ ಅಮೃತ ಕೌರ್: ಸೆಂಟ್ರಲ್ ಪ್ರಾವಿನ್ಸ್ ಬೇರಾರ್
♦ ರೇಣುಕಾ ರೇ: ಪಶ್ಚಿಮ ಬಂಗಾಳ -ಮಹಿಳಾ ಸಮಾನತೆ.
♦ ಸರೋಜಿನಿ ನಾಯ್ಡು: ಬಿಹಾರ -ಎಲ್ಲರ ಒಳಗೊಳ್ಳುವ ಸಂವಿಧಾನಸಭೆ.
♦ ಸುಚೇತಾ ಕೃಪಲಾನಿ: ಯುನೈಟೆಡ್ ಪ್ರಾವಿನ್ಸ್ -ವಂದೇ ಮಾತರಂ.
♦ ವಿಜಯ ಲಕ್ಷ್ಮೀಪಂಡಿತ್: ಯುನೈಟೆಡ್ ಪ್ರಾವಿನ್ಸ್ -ಏಶ್ಯದ ಮಹತ್ವ.
ಇಷ್ಟು ಜನ ಮಹಿಳೆಯರು ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಅವರ ಮತಕ್ಷೇತ್ರದಲ್ಲಿ ಚರ್ಚಿಸಿದ ವಿಷಯಗಳನ್ನು ನಾವು ಕಾಣುತ್ತೇವೆ.
ಸಂವಿಧಾನದಲ್ಲಿ ಮಹಿಳೆಯರಿಗೆ ಒದಗಿಸಿರುವ ಸವಲತ್ತುಗಳು
♦ 14ನೇ ವಿಧಿಯ ಪ್ರಕಾರ ಕಾನೂನು ಮುಂದೆ ಎಲ್ಲರು ಸಮಾನರು.
♦ 15ನೇ ವಿಧಿಯ ಪ್ರಕಾರ ಧರ್ಮ, ಜಾತಿ, ಲಿಂಗ, ಭಾಷೆ, ಜನ್ಮಸ್ಥಳ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
♦ 16ನೇ ವಿಧಿಯ ಪ್ರಕಾರ ಸಾರ್ವಜನಿಕ ಹುದ್ದೆಗಳನ್ನು ಹೊಂದಲು
♦ 39(ಅ) ಸ್ತ್ರೀ ಅಥವಾ ಪುರುಷರು ಎಂಬ ಭೇದಭಾವವಿಲ್ಲದೆ ಜೀವನಕ್ಕೆ ಅವಶ್ಯಕವಾದ ಸಾಧನಗಳನ್ನು ಒದಗಿಸುವ ನೀತಿ ಜಾರಿ.
♦ 1961ಲ್ಲಿ ಮೆಟರ್‌ನಿಟಿ ಬೆನಿಫಿಟ್ ಕಾಯ್ದೆ ಜಾರಿಗೆ
♦ 1955ರಲ್ಲಿ ಹಿಂದೂ ವಿವಾಹ ಅಧಿನಿಯಮ ಕಾಯ್ದೆ ಜಾರಿಗೆ ಇದರಲ್ಲಿ ವಿಚ್ಛೇದ ವಿಷಯವು ಬರುತ್ತದೆ.
♦ 1955 ವಿವಾಹ ನೋಂದಾಯಿತ ಕಾಯ್ದೆ ಜಾರಿಗೆ.
♦ 1956 ಹಿಂದೂ ವಾರಸಾ ಅಧಿನಿಯಮ ಕಾಯ್ದೆ ಜಾರಿಗೆ ತವರ ಮನೆಯ ಆಸ್ತಿಯ ಹಕ್ಕನ್ನು ಪಡೆಯುವುದು.
♦ 1961ರಲ್ಲಿ ಪ್ರಸೂತಿ ಸೌಲಭ್ಯ ಕಾಯ್ದೆ.
♦ 1971ರಲ್ಲಿ ವೈದ್ಯಕೀಯ ಗರ್ಭ ನಿವಾರಣ ಕಾಯ್ದೆ ಜಾರಿಗೆ.
♦ 1976ರಲ್ಲಿ ಸಮಾನ ವೇತನ ಕಾಯ್ದೆ.
♦ 1961ರಲ್ಲಿ ವರದಕ್ಷಿಣೆ ನಿಷೇದ ಕಾಯ್ದೆ ಜಾರಿಗೆ.
♦ 1956ರಲ್ಲಿ ಹಿಂದೂ ದತ್ತ ಜಿೀವನಾಂಶಗಳ ಕಾಯ್ದೆ ಜಾರಿಗೆ ಬಂತು.
ಇಷ್ಟೆಲ್ಲ ಕಾಯ್ದೆಗಳು ಇದ್ದರೂ ಭಾರತ ದೇಶದಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದು ನಾವು ಇಂದೂ ಕಾಣುತ್ತಿದ್ದೇವೆ. ಗ್ರಾಮೀಣ ಭಾರತವಾದ ನಮ್ಮ ದೇಶದ ಹಳ್ಳಿಗಳಲ್ಲಿ ಅತ್ಯಾಚಾರಗಳು, ಬಲತ್ಕಾರಗಳು ನಡೆದರೂ ಎಷ್ಟೋ ಕೇಸ್‌ಗಳು ಎಫ್‌ಐಆರ್ ಆಗದೆ ಇರುವುದು ನಾವು ಕಾಣಬಹುದು. ಹಾಗಾಗಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ದಿನಾಚರಣೆ ಆಗದೆ ಹೆಣ್ಣು ಮಕ್ಕಳಿಗೆ ಗೌರವ ಕೊಡುವ, ಅವರಿಗೆ ಎಲ್ಲಾ ಸೌಲಭ್ಯಗಳು ಒದಗಿಸಿಕೊಡುವಲ್ಲಿ ಮುಂದಾಗಬೇಕು.
ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ.
ಅಕ್ಷರ ಸಾಧಕಿ
ಸಾವಿತ್ರಿಬಾಯಿ ಫುಲೆ: ಕತ್ತಲ ಜಗತ್ತಿಗೆ ಅಕ್ಷರದ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ರೀತಿಯಲ್ಲಿ ಸೇವೆ ಸಲ್ಲಿಸಿದ ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಲೆ ಫುಲೆ. ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ನಾಯಿಗಾಂವ್ ಎಂಬ ಕುಗ್ರಾಮದಲ್ಲಿ 1831ರ ಜನವರಿ 3ರಂದು ಸಾವಿತ್ರಿಬಾಯಿ ಫುಲೆ ಜನಿಸಿದರು. ತಾಯಿಯ ಹೆಸರು ಲಕ್ಷ್ಮೀಬಾಯಿ, ತಂದೆಯ ಹೆಸರು ಖಂಡೋಜಿ ನಾವಸೆ ಪಾಟೀಲ, ಇವರು ಹೂಗಾರ ಅಥವಾ ಹೂಬಣಜಿಗ ಜಾತಿಗೆ ಸೇರಿದವರಾಗಿದ್ದರು. ದೇಶದ ಪ್ರಥಮ ಶಿಕ್ಷಕಿ 1840ರಲ್ಲಿ 9 ವರ್ಷದ ಸಾವಿತ್ರಿಬಾಯಿ ಫುಲೆ 13 ವರ್ಷದ ಜ್ಯೋತಿಬಾ ಫುಲೆಯವರೊಂದಿಗೆ ಮದುವೆ ನೆರವೇರಿತು. ಈಕೆ ಆರಂಭದಲ್ಲಿ ಶಿಕ್ಷಣ ಪಡೆದಿರಲಿಲ್ಲ. ತನ್ನ ಪತಿಯಾದ ಜ್ಯೋತಿ ಬಾ ಫುಲೆ ಇವರಿಗೆ ಶಿಕ್ಷಣವನ್ನು ಮನೆಯಲ್ಲಿ ಕಲಿಸಿ, ಗಣಿತ, ಸಂಸ್ಕೃತ, ಸಾಮಾನ್ಯಜ್ಞಾನ ಇನ್ನೂ ಮುಂತಾದ ವಿಷಯಗಳು ಕಲಿಸಿ ಶಿಕ್ಷಕಿಯನ್ನಾಗಿ ಮಾಡಿದ ಕೀರ್ತಿ ಜ್ಯೋತಿ ಬಾ ಫುಲೆಗೆ ಸಲ್ಲುತ್ತದೆ.
ಇಂಡಿಯಾದ ಭೂಪಟದಲ್ಲಿ ಪ್ರಥಮ ಬಾರಿಗೆ 1848ರಲ್ಲಿ ಶೂದ್ರತಿಶೂದ್ರರ ಹೆಣ್ಣು ಮಕ್ಕಳಿಗೆ ಶಾಲೆ ಆರಂಭ ಮಾಡಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ಮತ್ತು ಜ್ಯೋತಿ ಫುಲೆ ಅವರಿಗೆ ಸಲ್ಲುತ್ತದೆ. ಕೇವಲ 8 ಜನ ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಅದು ಕೇವಲ 3 ವರ್ಷದಲ್ಲಿ ಸಾವಿರಾರು ಕೆಳ ಸಮುದಾಯದ ಮಕ್ಕಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಈ ಕೆಲಸವನ್ನು ತಡೆಯಲು ಉನ್ನತ ಜಾತಿಯವರಿಂದ ಟೊಮ್ಯಾಟೊ, ಮೊಟ್ಟೆ, ಕಲ್ಲಿನಿಂದ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅವಮಾನ, ಅಪಮಾನ ಮಾಡುವುದು, ದಾರಿಯುದ್ದಕ್ಕೂ ಗಂಜಲ, ಸೆಗಣಿ ನೀರು ಎರಚುವುದು ಸಾಮಾನ್ಯವಾಗಿತ್ತು. ಇವೆಲ್ಲವನ್ನು ಸಹಿಸಿಕೊಂಡು ತಮ್ಮ ಜೀವನಪೂರ್ತಿ ಕಷ್ಟಗಳನ್ನೇ ಅನುಭವಿಸಿ ತಮ್ಮ ಇಡೀ ಜೀವನ ತ್ಯಾಗ ಮಾಡಿ ಶಿಕ್ಷಣ ನೀಡಿದರು. ಅವರ ಪ್ರಯತ್ನದ ಫಲದಿಂದಾಗಿಯೇ ಮುಂದೆ ಪುಣೆಯ ಸುತ್ತಮುತ್ತ 18 ಶಾಲೆಗಳಾಗಿ ಮಾರ್ಪಟ್ಟವು. ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ವಿಧವೆಯರಿಗೆ ಕೇಶಮುಂಡನವನ್ನು ವಿರೋಧಿಸಿ, ಅವರಿಗೆ ಮತ್ತೆ ಮರುಮದುವೆ ಮಾಡಿಸುವುದುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ ಸಾವಿತ್ರಿಬಾಯಿ