ನಿರಾಶ್ರಿತರಿಗೆ ಪೌರತ್ವ ಕೊಡಲು ನಿರಾಕರಿಸಿದ್ದ ವಾಜಪೇಯಿ ಸರಕಾರ
ಬಿಜೆಪಿ ಸರಕಾರ 2003-4ರಲ್ಲಿ ಯಾವ ಕಾರಣಕ್ಕೂ ಆ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನಿರಲಿ ಶಾಶ್ವತ ಆಶ್ರಯವನ್ನು ಕೊಡುವ ಪರಿಸ್ಥಿತಿಯಲ್ಲಿ ಭಾರತವಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿತ್ತು!
ಇದು 2003ರ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಅಧ್ಯಯನ ಮಾಡಲು ರಚಿಸಿದ್ದ ಪ್ರಣಬ್ ಮುಖರ್ಜಿ ನೇತೃತ್ವದ ಸದನ ಸಮಿತಿಯ ವರದಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದ ಹಿಂದೂಗಳ ಬಗ್ಗೆ ಈಗ ಕಣ್ಣೀರು ಸುರಿಸುತ್ತಿದೆಯಷ್ಟೇ.....
ಆದರೆ ಇದೇ ಬಿಜೆಪಿ ಸರಕಾರ 2003-4ರಲ್ಲಿ ಯಾವ ಕಾರಣಕ್ಕೂ ಆ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನಿರಲಿ ಶಾಶ್ವತ ಆಶ್ರಯವನ್ನು ಕೊಡುವ ಪರಿಸ್ಥಿತಿಯಲ್ಲಿ ಭಾರತವಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿತ್ತು!
ಇದು 2003ರ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಅಧ್ಯಯನ ಮಾಡಲು ರಚಿಸಿದ್ದ ಪ್ರಣಬ್ ಮುಖರ್ಜಿ ನೇತೃತ್ವದ ಸದನ ಸಮಿತಿಯ ವರದಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ.
ಈಗ ನಮಗೆಲ್ಲಾ ತಿಳಿದಿರುವಂತೆ 2003ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರಕಾರ ಭಾರತದ ಪೌರತ್ವ ಪರಿಕಲ್ಪನೆಯನ್ನೇ ಬದಲಾಯಿಸುವಂತಹ ಹಲವಾರು ದುಷ್ಟ ತಿದ್ದುಪಡಿಗಳನ್ನು ಮಾಡಿತು.
ಆ ತಿದ್ದುಪಡಿಗಳ ಭಾಗವಾಗಿಯೇ ಎನ್‌ಪಿಆರ್-ಎನ್‌ಆರ್‌ಸಿ ಹುಟ್ಟಿಕೊಂಡವು. ಹಾಗೆಯೇ 1987-2004ರ ನಡುವೆ ಹುಟ್ಟಿದವರ ತಂದೆ-ತಾಯಿಗಳಲ್ಲಿ ಒಬ್ಬರು ಭಾರತೀಯರಾಗಿರಬೇಕೆಂಬ ಹಾಗೂ 2004ರ ನಂತರ ಹುಟ್ಟಿದವರ ತಂದೆ-ತಾಯಿಗಳಿಬ್ಬರು ಭಾರತೀಯರಾಗಿರಬೇಕು ಅಥವಾ ತಂದೆ-ತಾಯಿಗಳಲ್ಲಿ ಒಬ್ಬರು ಭಾರತೀಯರಾಗಿರಬೇಕು ಮತ್ತೊಬ್ಬರು ಅಕ್ರಮ ವಲಸಿಗರಾಗಿರಬಾರದೆಂಬ ಷರತ್ತುಗಳು ಸೇರ್ಪಡೆಯಾಗಿದ್ದು ಈ ತಿದ್ದುಪಡಿಯ ಮೂಲಕವೇ.
ಹಾಗೂ ಮೊತ್ತಮೊದಲ ಬಾರಿಗೆ ಪೌರತ್ವ ಕಾಯ್ದೆಯ ಭಾಗವಾಗಿ ಅಕ್ರಮ ವಲಸಿಗರೆಂಬ ಪರಿಕಲ್ಪನೆ ಹಾಗೂ ಅವರಿಗೆ ರಿಜಿಸ್ಟ್ರೇಷನ್ ಮತ್ತು ನ್ಯಾಚುರಲೈಸೇಶನ್ ಮೂಲಕವೂ ಪೌರತ್ವ ಸಿಗದಂತಹ ಷರತ್ತುಗಳು ಇದೇ ತಿದ್ದುಪಡಿಗಳ ಮೂಲಕ ಸೇರ್ಪಡೆಯಾದವು.
ಈ ತಿದ್ದುಪಡಿಗಳನ್ನು ಮಸೂದೆಯ ರೂಪದಲ್ಲಿ ಸಂಸತ್ತಿನಲ್ಲಿ ವಾಜಪೇಯಿ ಸರಕಾರ ಮಂಡಿಸಿದಾಗ ಅದರ ಪರಿಶೀಲನೆಗೆ ಕಾಂಗ್ರೆಸ್ ನಾಯಕ - ಸಂಸದ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಎಡ ಪಕ್ಷಗಳನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳ 43 ಸಂಸತ್ ಸದಸ್ಯರ ಸಮಿತಿಯೊಂದನ್ನು ರಚಿಸಲಾಯಿತು.
ಈ ಪ್ರಣಬ್ ಮುಖರ್ಜಿ ಸಮಿತಿಯು 2003 ರ ಡಿಸೆಂಬರ್‌ನಲ್ಲಿ ಈ ಪೌರತ್ವ ಕಾಯ್ದೆ ತಿದ್ದುಪಡಿ-2003ರ ಬಗ್ಗೆ ತನ್ನ ವರದಿಯನ್ನು ನೀಡಿತು. ಇದಕ್ಕಾಗಿ ಆ ಸಮಿತಿಯು ನಡೆಸಿದ ಸಮಾಲೋಚನೆಗಳಲ್ಲಿ ವಾಜಪೇಯಿ ಸರಕಾರದ ಪ್ರತಿನಿಧಿಯಾಗಿ ಗೃಹಕಾರ್ಯದರ್ಶಿಗಳು ಖುದ್ದು ಹಾಜರಿದ್ದು ಸಮಿತಿ ಸದಸ್ಯರ ಪ್ರಶ್ನೆ ಹಾಗೂ ಅನುಮಾನಗಳಿಗೆ ಸರಕಾರದ ನಿಲುವು ಹಾಗೂ ಉತ್ತರಗಳನ್ನು ನೀಡಿದ್ದರು.
ಪ್ರಣಬ್ ಸಮಿತಿಯಲ್ಲಿ ಚರ್ಚೆಯಾದ ಬಹುಮುಖ್ಯವಾದ ವಿಷಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿರುವ ಹಿಂದೂಗಳ ಪರಿಸ್ಥಿತಿಯ ಕುರಿತು.
- 6. The issue of constant influx of refugees from the neighbouring countries due to civil commotion and religious persecution was raised in the Committee.....The religious persecution of minorities in those countries which resulted into mass exodus of people from their ancestral lands particularly from Bangladesh was emphasized in the Committee...)
ಸಮಿತಿಯ ಹಲವು ಸದಸ್ಯರು ಆ ದೇಶಗಳ ಹಿಂದೂ ಸಂತ್ರಸ್ತರಿಗೆ ಭಾರತದಲ್ಲಿ ಪೌರತ್ವವನ್ನು ಕೊಡಬೇಕೆಂದು ಆಗ್ರಹಿಸುತ್ತಾರೆ. (ಪ್ರಣಬ್ ಮುಖರ್ಜಿ ಸಮಿತಿ ವರದಿಯ 6ನೇ ಪ್ಯಾರಾ ಗಮನಿಸಬಹುದು ಆದರೆ ಸಮಿತಿ ಸದಸ್ಯರ ಈ ಆಗ್ರಹದ ಬಗ್ಗೆ ಉತ್ತರವನ್ನು ನೀಡಿದ ವಾಜಪೇಯಿ ಸರಕಾರದ ಬಾಧ್ಯಸ್ಥ ಅಧಿಕಾರಿಗಳು ಬಾಂಗ್ಲಾದೇಶದ ಧಾರ್ಮಿಕ ನಿರಾಶ್ರಿತರು 1971ರ ಮಾರ್ಚ್ 25ಕ್ಕೆ ಮುಂಚೆ ಭಾರತಕ್ಕೆ ಬಂದಿದ್ದಾರೆ ಅವರಿಗೆ ಪೌರತ್ವ ಕೊಡಬಹುದೆಂಬ ಕಾಯ್ದೆ ಈಗಾಗಲೇ ಇದ್ದು ಅದನ್ನು ಸಡಿಲಗೊಳಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸುತ್ತಾರೆ.
ಏಕೆಂದರೆ 1971ರ ಪರಿಸ್ಥಿತಿಗೂ ಇಂದಿಗೂ ಸಾಕಷ್ಟು ವ್ಯತ್ಯಾಸವಿದ್ದು ಈಗ ಭಾರತದ ಜನಸಂಖ್ಯೆಯೇ ಹೆಚ್ಚಾಗಿದ್ದು ಭಾರತವೇ ನಿರುದ್ಯೋಗ ಇನ್ನಿತರ ಹಲವಾರು ಸಮಸ್ಯೆಗಳನ್ನೆದುರಿಸುತ್ತಿದೆ. ಆದ್ದರಿಂದ ಈಗ ಭಾರತವು ಇನ್ನಷ್ಟು ನಿರಾಶ್ರಿತರ ಭಾರವನ್ನು ಹೊರಲು ಸಾಧ್ಯವೇ ಇಲ್ಲ. ಈ ಎಲ್ಲಾ ಕಾರಣಗಳಿಂದ 1971ರ ನಂತರವೂ ಭಾರತಕ್ಕೆ ಬಂದವರಿಗೆ ಬಿಲ್‌ಖುಲ್ ಪೌರತ್ವವನ್ನು ಕೊಡಲು ಸಾಧ್ಯವಿಲ್ಲವೆಂದು ವಾಜಪೇಯಿ ಸರಕಾರ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ನಿರಾಕರಿಸುತ್ತದೆ .
6.1-In response to the views expressed in the Committee, the Ministry of Home Affairs has replied that as regards grant of citizenship to the refugees who are in India, the Ministry has already agreed to the cut-off date of 25 March 1971.
6.1.1-The Ministry also stated that the situation, which prevailed in 1971 was completely different from the
present situation in India. India has large population and land-population ratio has decreased over the period of time. Employment opportunities are not available due to increase of population manifold. In such a situation, the country is unable to undertake additional burden of refugees from other countries. Keeping in view the economic and population reasons, citizenship cannot be granted to the refugees who have come on or after 25 March 1971....)
ಪ್ರಣಬ್ ಸಮಿತಿ ವರದಿ: ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಸರಕಾರದ ಮೋಸಪೂರಿತ ಆಷಾಢಭೂತಿತನ ಬಯಲಾಗುವುದು ಈ ಮುಂದಿನ ಉತ್ತರದಲ್ಲಿ.
ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಾ ವಾಜಪೇಯಿ ಸರಕಾರ ಮತ್ತೊಂದು ಸತ್ಯವನ್ನು ಹೇಳಿಬಿಡುತ್ತದೆ. ಅದರ ಪ್ರಕಾರ ಇತ್ತೀಚಿನ ದಿನಗಳಲ್ಲಿ ನೆರೆಹೊರೆ ದೇಶಗಳಿಂದ ಭಾರತಕ್ಕೆ ವಲಸೆ ಬರುತ್ತಿರುವವರು ಆರ್ಥಿಕ ಕಾರಣಗಳಿಗಾಗಿ ಬರುತ್ತಿದ್ದಾರೆಯೇ ವಿನಾ ಧಾರ್ಮಿಕ ದೌರ್ಜನ್ಯದ ನಿರಾಶ್ರಿತರಾಗಿ ಅಲ್ಲ. !! ಆದ್ದರಿಂದ ಅಂತಹವರಿಗೆ ಪೌರತ್ವ ನೀಡುವುದಕ್ಕೆ ಯಾವ ಸಮರ್ಥನೆಗಳು ಇಲ್ಲವೆಂದು ವಾಜಪೇಯಿ ಸರಕಾರ ಹೇಳುತ್ತದೆ.
ಪ್ರಣಬ್ ಸಮಿತಿ ವರದಿ:
(6.1.2- The Ministry further stated that it is pertinent to mention that in the recent years people from neighbouring countries are coming to India more for economic reasons rather than as refugees. Since people are coming as illegal migrants for economic reasons, there is no justification to grant them citizenship in India. )
ಇದು ಎರಡು ನಾಲಿಗೆಯ ಬಿಜೆಪಿ ಸರಕಾರದ ವಾದಗಳು. ಬಿಜೆಪಿಯು ಮುಸ್ಲಿಮರಿಗಿಂತ ಹಿಂದೂಗಳಿಗೆ ಶತ್ರುಗಳು ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆಯ ಅಗತ್ಯವಿದೆಯೇ ?
(ಪ್ರಣಬ್ ಮುಖರ್ಜಿ ಸಮಿತಿಯ ಪೂರ್ಣ ಪಾಠ ಈ ವೆಬ್ ವಿಳಾಸದಲ್ಲಿ ದೊರೆಯುತ್ತದೆ:
http://164.100.47.5/rs/book2/reports/home_aff/107threport.htm )