ಕೊರೋನ ಲಾಕ್ ಡೌನ್: ಬಡವರಿಗೆ ಆಹಾರ ಧಾನ್ಯ ವಿತರಿಸಲು ಮುಂದೆ ಬಂದ ನಿರ್ದೇಶಕ ಅನುಭವ್ ಸಿನ್ಹಾ
ಮುಂಬೈ : ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಈಗಾಗಲೇ ದಿನಗೂಲಿ ನೌಕರರಿಗೆ ಪರಿಹಾರ ನಿಧಿ ಹಾಗೂ ರೇಷನ್ ವಿತರಿಸುವುದಾಗಿ ಹೇಳಿದೆ. ಇದೇ ಹೆಜ್ಜೆ ಇಟ್ಟಿರುವ ಚಿತ್ರ ನಿರ್ದೇಶಕ, `ಥಪ್ಪಡ್' ಖ್ಯಾತಿಯ ಅನುಭವ್ ಸಿನ್ಹಾ ಕೊರೋನ ವೈರಸ್ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ ಆಹಾರ ಧಾನ್ಯ ವಿತರಿಸಲು ಮುಂದಾಗಿದ್ದಾರೆ.
ಮುಂಬೈಯ ಮೂರ್ನಾಲ್ಕು ಪ್ರದೇಶಗಳಲ್ಲಿ ಆಹಾರಧಾನ್ಯ ವಿತರಿಸಲು ತಮಗೆ ಸ್ವಯಂಸೇವಕರು ಬೇಕೆಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಅಗತ್ಯವುಳ್ಳವರಿಗೆ ವಾರದಲ್ಲಿ ಎರಡು ಬಾರಿ ಆಹಾರ ಧಾನ್ಯ ವಿತರಿಸುವುದಾಗಿಯೂ ಅವರು ಹೇಳಿದ್ದಾರೆ. ಅನುಭವ್ ಸಿನ್ಹಾ ಪ್ರತಿ ದಿನ ಎರಡು ಬಾರಿ ಸ್ವಯಂಸೇವಕರ ಮೂಲಕ ಈ ಕಾರ್ಯ ನೆರವೇರಿಸುವುದಾಗಿ ಹೇಳುತ್ತಾರೆ.
Next Story