ಮಹಾನಗರಗಳಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ದರ 65 ರೂ.ಇಳಿಕೆ
ಹೊಸದಿಲ್ಲಿ,ಎ.1: ದೇಶದ ಮೆಟ್ರೋ ನಗರಗಳಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ಅಡುಗೆ ಅನಿಲ ದರಗಳಲ್ಲಿ 65 ರೂ.ವರೆಗೆ ಇಳಿಕೆ ಮಾಡಲಾಗಿದೆ ಎಂದು ಭಾರ ತೀಯ ತೈಲ ನಿಗಮ (ಐಓಸಿ) ಬುಧವಾರ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಪ್ರತಿ ಸಿಲಿಂಡರ್‌ಗೆ 805.50 ರೂ.ಇದ್ದ ಎಲ್‌ಪಿಜಿ ಸಿಲಿಂಡರ್ ದರವನ್ನು 744 ರೂ.ಗೆ ಇಳಿಸಲಾಗಿದೆ. ಮುಂಬೈಯಲ್ಲಿ 776.50 ರೂ. ಇದ್ದ ಎಲ್‌ಪಿಜಿ ಬೆಲೆ 714.50 ರೂ.ಗೆ ಇಳಿದಿದೆ. ಅದೇ ರೀತಿ ಕೋಲ್ಕತಾದಲ್ಲಿ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 839.50 ರೂ.ನಿಂದ 774.50 ರೂ.ಗೆ ಹಾಗೂ ಚೆನ್ನೈನಲ್ಲಿ 826 ರೂ.ನಿಂದ 761.50 ರೂ.ಗೆ ಇಳಿಸಲಾಗಿದೆ.
ಪ್ರಸಕ್ತ ಕೇಂದ್ರ ಸರಕಾರವು ವರ್ಷದಲ್ಲಿ 14.2 ಕೆ.ಜಿ. ತೂಕದ 12 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಅದಕ್ಕಿಂತ ಅಧಿಕ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಸಬ್ಸಿಡಿರಹಿತವಾಗಿ ಪಡೆದುಕೊಳ್ಳಬೇಕಾಗುತ್ತದೆ.
ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಕುಸಿತವುಂಟಾದ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್‌ಗಳ ದರ ದರ ಕಡಿತ ಮಾಡಲಾಗಿದೆ.