ಒಡಿಶಾ: ಮನೆಬಿಟ್ಟು ಹೊರಹೋಗುವಾಗ ಮುಖ ಕವಚ ಕಡ್ಡಾಯ
ಭುವನೇಶ್ವರ, ಎ.7: ಒಡಿಶಾದಲ್ಲಿ ನಾಳೆಯಿಂದ (ಎಪ್ರಿಲ್ 9ರಿಂದ) ಜನರು ಮನೆಯಿಂದ ಹೊರಹೋಗಬೇಕಿದ್ದರೆ ಕಡ್ಡಾಯವಾಗಿ ಮಾಸ್ಕ್ ಅಥವಾ ಎರಡು ಪದರದ ಬಟ್ಟೆಯ ತುಂಡಿನಿಂದ ಮುಖ ಮುಚ್ಚಿಕೊಳ್ಳಬೇಕು ಎಂದು ಸರಕಾರ ಸೂಚಿಸಿದೆ.
ಹೀಗೆ ಕಡ್ಡಾಯಗೊಳಿಸಿದ ದೇಶದ ಪ್ರಪ್ರಥಮ ರಾಜ್ಯವಾಗಿದೆ ಒಡಿಶಾ. ರಾಜ್ಯದಲ್ಲಿ ಕೊರೋನ ಸೋಂಕಿನ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಈ ವೈರಸ್ ಸಣ್ಣಸಣ್ಣ ಹನಿ(ಸೀನುವಾಗ ಅಥವಾ ಕೆಮ್ಮುವಾಗ ಹೊರಬೀಳುವ ಸಣ್ಣ ಹನಿ)ಗಳಿಂದ ಹರಡುತ್ತಿರುವ ಕಾರಣ ಎಪ್ರಿಲ್ 9ರ ಬೆಳಿಗ್ಗೆ 7 ಗಂಟೆಯಿಂದ ಜನರು ಮನೆಯಿಂದ ಹೊರಹೋಗಬೇಕಿದ್ದರೆ ಮೂಗು ಮತ್ತು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸರಕಾರ ತಿಳಿಸಿದೆ.
Next Story