ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅಹ್ವದ್ ಗೆ ಕೊರೋನ ಸೋಂಕು
ಮುಂಬೈ: ಮಹಾರಾಷ್ಟçದಲ್ಲಿ ಕೊರೋನವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ರಾಜ್ಯದ ವಸತಿ ಸಚಿವ ಜಿತೇಂದ್ರ ಅಹ್ವದ್ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
ಮುಂಜಾಗರೂಕತಾ ಕ್ರಮವಾಗಿ ತಪಾಸಣೆಗಾಗಿ ಥಾಣೆಯ ಖಾಸಗಿ ಆಸ್ಪತ್ರೆಗೆ 54 ವರ್ಷದ ಸಚಿವ ದಾಖಲಾಗಿದ್ದ ಸಂದರ್ಭ ಅವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಇದಕ್ಕೂ ಮೊದಲು ಸಚಿವ ಮತ್ತವರ ಕುಟುಂಬದ 15 ಮಂದಿ ಸದಸ್ಯರು ಗೃಹ ಕ್ವಾರಂಟೈನಿನಲ್ಲಿದ್ದರು. ಅವರ ಭದ್ರತಾ ಸಿಬ್ಬಂದಿಯೊಬ್ಬರು ಕೊರೋನ ಪಾಸಿಟಿವ್ ಆದ ನಂತರ ಅವರು ಈ ಕ್ರಮ ಕೈಗೊಂಡಿದ್ದರು.
ಸಚಿವರು ಈ ಹಿಂದೆ ಸಭೆಯೊಂದರಲ್ಲಿ ಭೇಟಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ನಂತರ ಕೊರೋನ ಸೋಂಕು ತಗಲಿತ್ತು. ಅವರಿಂದ ಸಚಿವರಿಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ.
ಸಚಿವರ ಆರೋಗ್ಯಸ್ಥಿತಿ ಸ್ಥಿರವಾಗಿದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Next Story