ಚಪ್ಪಾಳೆ, ಹೂ ಸುರಿಸುವುದನ್ನು ಬೇರೆ ದೇಶಗಳಿಂದ ನಕಲು ಹೊಡೆಯುವ ಬದಲು ರಕ್ಷಣಾ ಕಿಟ್ ನೀಡಬಾರದೇ?
ಕೊರೋನ ವಿರುದ್ಧದ ಹೋರಾಟ
ಆತ್ಮೀಯರೇ,
ಅಂದಹಾಗೆ..... ಇವತ್ತು ನಮ್ಮ ದೇಶದ ರಕ್ಷಣಾ ಪಡೆಗಳು-ಸೇನೆ-ವಾಯುಪಡೆ ಹಾಗು ನೌಕಾಪಡೆ ಮೂರೂ- ಕೋವಿಡ್ ಸಮರದ ಮುಂಚೂಣಿ ಯೋಧರಾದ ನಮ್ಮ ವೈದ್ಯಕೀಯ ಸಿಬ್ಬಂದಿಗೆ ಪುಷ್ಪಮಾಲೆ, ಸೆಲ್ಯೂಟ್ ಹಾಗು ದೀಪಾಲಂಕಾರಗಳ ಮೂಲಕ ಗೌರವ ಸಲ್ಲಿಸಿದ್ದಾರೆ. ಆದರೆ, ಇಂದು ನಮ್ಮ ವೈದ್ಯಕೀಯ ಸಿಬ್ಬಂದಿಗೆ ಹಾಗು ಇತರರಿಗೆ ಬೇಕಿರುವುದು ಚಪ್ಪಾಳೆಯಲ್ಲ. ಕೊರೋನಾದಿಂದ ರಕ್ಷಿಸಬಲ್ಲ ರಕ್ಷಾ ಕವಚಗಳು.
ಸರ್ಕಾರ ಅದನ್ನು ಸರಿಯಾಗಿ ಸರಬರಾಜು ಮಾಡದಿರುವುದರಿಂದಲೇ ಮಧ್ಯಪ್ರದೇಶದಲ್ಲಿ ಇಂದು ಅತಿ ಹೆಚ್ಚು ಕೋವಿಡ್ ಪೀಡಿತರಾಗಿರುವುದು ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು. ಹಾಗೆಯೇ ದೇಶದ ಎಲ್ಲಾ ಕಡೆಗಳಲ್ಲೂ ಅತಿ ಹೆಚ್ಚು ಕೋವಿಡ್ ಸೋಂಕಿತ ಸಮುದಾಯ ವೈದ್ಯಕೀಯ ಸಿಬ್ಬಂದಿಯೇ ಆಗಿದ್ದಾರೆ. ಇಷ್ಟಾದರೂ ಸರ್ಕಾರ ಕೊಡುತ್ತಿರುವುದು ಚಪ್ಪಾಳೆಯನ್ನೇ ಹೊರತು ರಕ್ಷಕ ಕಿಟ್ ಗಳನ್ನಲ್ಲ.
ಅಷ್ಟು ಮಾತ್ರವಲ್ಲ... ಈ ಚಪ್ಪಾಳೆಯ ಐಡಿಯಾ ಕೂಡ ಮೋದಿ ಸರಕಾರದ್ದಲ್ಲ....ವಿದೇಶದ ನಕಲು!!
ಆದರೂ, ನಾಗರಿಕರು ಹಾಗು ಸೇನಾಪಡೆಗಳು ಸ್ವಪ್ರೇರಣೆಯಿಂದ ಚಪ್ಪಾಳೆ ತಟ್ಟುತ್ತಿರುವುದು, ದೀಪ ಹಚ್ಚುತ್ತಿರುವುದು ನಮ್ಮ ದೇಶದಲ್ಲೇ ಪ್ರಥಮ. ಇದನ್ನು ಈಗ ಇಡೀ ವಿಶ್ವವೇ ಕೊಂಡಾಡುತ್ತಿದೆ ಮತ್ತು ಆಚರಿಸುತ್ತಿದೆ ಎಂದು ಸ್ವತಃ ಪ್ರಧಾನಿಗಳೇ ಎಪ್ರಿಲ್ 10ರ ಭಾಷಣದಲ್ಲಿ ಹೇಳಿದ್ದಾರೆ.
ಇದು ಎಷ್ಟು ಸತ್ಯ.. ಸ್ವಲ್ಪ ಕೆಳಗಿನ ಲಿಂಕ್ ಗಳನ್ನೂ ನೋಡಿ.
1. ಪ್ರಧಾನಿ ಮೋದಿಯವರು ವೈದ್ಯಕೀಯ ಸಿಬ್ಬಂದಿಗಳ ಗೌರವದಲ್ಲಿ ಚಪ್ಪಾಳೆ ತಟ್ಟಲು ಆದೇಶ ಕೊಟ್ಟಿದ್ದು ಮಾರ್ಚ್ 22ಕ್ಕೆ.
► ಆದರೆ ಮೋದಿ ಸರ್ಕಾರ ಇದನ್ನು ನೇರವಾಗಿ ಇಟಲಿ ಮತ್ತು ಸ್ಪೇನ್ ನಿಂದ ನಕಲು ಮಾಡಿದ್ದು ಎಂಬುದನ್ನು ಸರ್ಕಾರವು ಹೇಳಲಿಲ್ಲ..ಮಾಧ್ಯಮಗಳು ಹೇಳಲಿಲ್ಲ..
►ಏಕೆಂದರೆ ಸ್ಪೇನ್ ಹಾಗು ಇಟಲಿ ದೇಶದ ಜನ ಇದನ್ನು ಸ್ವಪ್ರೇರಣೆಯಿಂದ ಮಾರ್ಚ್ 14ರಂದು ತಮ್ಮ ದೇಶಾದ್ಯಂತ ಮಾಡಿದ್ದರು. ಇದನ್ನು ಜಗತ್ತಿನ ಮಾಧ್ಯಮಗಳೆಲ್ಲಾ ವರದಿ ಮಾಡಿದ್ದವು.
►ಅದಾದ ಒಂದು ವಾರದ ನಂತರ ಅದನ್ನೇ ನಮ್ಮ ದೇಶದಲ್ಲಿ ನಕಲು ಮಾಡಲು ಮೋದಿ ಸರ್ಕಾರ ಕರೆ ಕೊಟ್ಟಿತು.
►ಸ್ಪೇನ್ ಹಾಗು ಇಟಲಿ ದೇಶಗಳಲ್ಲಿ ಮಾರ್ಚ್ 14 ರಂದು ನಡೆದ ಬಾಲ್ಕನಿ ಚಪ್ಪಾಳೆ ಕಾರ್ಯಕ್ರಮದ ವರದಿಗೆ ಕೆಳಗಿನ ಲಿಂಕ್ ಗಳನ್ನೂ ನೋಡಿ:
https://www.youtube.com/watch?v=RwPBYduYwqI
youtube.com/watch?v=MfI1b_zcX2w
2. ಇಂದು ಸೇನಾ ಪಡೆಗಳು ವೈದ್ಯರಿಗೆ ಪುಷ್ಪವೃಷ್ಟಿ ಮಾಡಿವೆ… ಇದೂ ಕೂಡಾ ಮೋದಿ ಸರ್ಕಾರದ ಒರಿಜಿನಾಲಿಟಿಯಲ್ಲ. ಅಮೆರಿಕಾದ ಸೇನಾಪಡೆಗಳು ಎಪ್ರಿಲ್ 28ರಂದು ತಮ್ಮ ದೇಶದಲ್ಲಿ ಈಗಾಗಲೇ ಮಾಡಿದ ಕಾರ್ಯಕ್ರಮವನ್ನು ಇಂದು ಮೇ-3ರಂದು- ಭಾರತದಲ್ಲಿ ನಕಲು ಮಾಡಲಾಗುತ್ತಿದೆ.
►ಎಪ್ರಿಲ್ 28ರಂದು ಅಮೇರಿಕಾದ ಸೇನಾ ತುಕಡಿಗಳು ನಡೆಸಿದ ಈ ಸೆಲ್ಯೂಟ್ ಡ್ರಿಲ್ ನ ವರದಿಗಾಗಿ ಈ ಲಿಂಕ್ ಗಳನ್ನೂ ನೋಡಿ:
https://www.youtube.com/watch?v=8mrc5W9PwIs
ಒಂದು ದೇಶದ ಅತ್ಯುತ್ತಮವಾದ ನಾಗರಿಕ ಮಾದರಿಯನ್ನು ಮತ್ತೊಂದು ದೇಶ ಅನುಸರಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ನಾವೇ ಮೊದಲು ಮಾಡುತ್ತಿರುವುದು ಎಂದು ಕೊಚ್ಚಿಕೊಳ್ಳುವುದು ಹಾಗು ಇಡೀ ದೇಶಕ್ಕೆ ಸುಳ್ಳು ಹೇಳುವುದು ನಾಗರಿಕವಲ್ಲ. ಅದರಿಂದ ಭಾರತವು ವಿಶ್ವಗುರುವಾಗುವುದಿರಲಿ ಜಗತ್ತಿನಾದ್ಯಂತ ನಗೆಪಾಟಲಿಗೀಡಾಗುತ್ತದೆ.
ಅಲ್ಲವೇ?
-ಶಿವಸುಂದರ್