ದಿಲ್ಲಿ: ಮದ್ಯ ಮಾರಾಟ ಆರಂಭವಾದ ಕೆಲವೇ ಗಂಟೆಗಳಲ್ಲಿ ಕೆಲವು ಮದ್ಯದ ಅಂಗಡಿ ಬಂದ್
ಹೊಸದಿಲ್ಲಿ, ಮೇ4: ದೇಶವ್ಯಾಪಿ ಮದ್ಯದಂಗಡಿಗಳು ತೆರೆದ ಕೆಲವೇ ಗಂಟೆಗಳ ಬಳಿಕ ಸುರಕ್ಷಿತ ಅಂತರದ ನಿಯಮವನ್ನು ಉಲ್ಲಂಘಿಸಿದ ಜನರು ಅಪಾರ ಸಂಖ್ಯೆಯಲ್ಲಿ ಮಳಿಗೆಗಳ ಎದುರು ಜಮಾಯಿಸಿದ ಕಾರಣ ದಿಲ್ಲಿಯಲ್ಲಿ ಹಲವು ಅಂಗಡಿಗಳ ಬಾಗಿಲು ಮುಚ್ಚಲಾಯಿತು.
ಕಂಟೈನ್‌ಮೆಂಟ್ ಪ್ರದೇಶಗಳ ಹೊರತುಪಡಿಸಿ ಎಲ್ಲ ವಲಯದಲ್ಲೂ ಸ್ವತಂತ್ರ ಮದ್ಯದ ಅಂಗಡಿಗಳನ್ನು ತೆರೆಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ನಗರ ಪ್ರದೇಶದ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿರುವ ಮದ್ಯದ ಅಂಗಡಿ ತೆರೆಯಲು ಅವಕಾಶ ವಿಲ್ಲ ಎಂದು ಸರಕಾರ ಹೇಳಿತ್ತು. ಕನಿಷ್ಠ ಆರು ಅಡಿ ಅಂತರದಲ್ಲಿ ನಿಂತುಕೊಂಡು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಒಂದು ಸಮಯದಲ್ಲಿ ಐದಕ್ಕಿಂತ ಹೆಚ್ಚು ಜನರು ಅಂಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಸರಕಾರ ಆದೇಶಿಸಿತ್ತು.
Next Story