ಅಮಿತ್ ಶಾ ಆರೋಗ್ಯದ ಬಗ್ಗೆ ಸುಳ್ಳು ಹರಡಿದ ನಾಲ್ವರ ಬಂಧನ
ಅಹ್ಮದಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದ ಬಗ್ಗೆ ಸುಳ್ಳು ಟ್ವೀಟ್ ಹರಡಿದ್ದಕ್ಕಾಗಿ ನಾಲ್ವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
“ಕೇಂದ್ರ ಸರಕಾರ, ಗುಜರಾತ್ ಸರಕಾರ ಮತ್ತು ಜನರು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಂಚುವುದು ಅಪರಾಧ. ಅಮಿತ್ ಶಾ ಮಾಡಿದ ಟ್ವೀಟ್ ಎಂದು ಫೋಟೊಶಾಪ್ ಮಾಡಲ್ಪಟ್ಟ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ಅಜಯ್ ತೋಮರ್ ಹೇಳಿದ್ದಾರೆ.
ಅಹ್ಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story