ಏರ್ ಇಂಡಿಯಾದ ಐವರು ಪೈಲಟ್‌ಗಳಿಗೆ ಕೋವಿಡ್-19 ಸೋಂಕು
ಮುಂಬೈ,ಮೇ 10: ಏರ್ ಇಂಡಿಯಾದ ಐವರು ಪೈಲಟ್‌ಗಳಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆದ್ಯತೆಯ ಮೇರೆಗೆ ಏರ್‌ಲೈನ್‌ನ 77ಪೈಲಟ್‌ಗಳಿಗೆ ಶನಿವಾರ ಕೊರೋನ ವೈರಸ್ ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಈವೇಳೆ ಐವರು ಪೈಲಟ್‌ಗಳಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಸೋಂಕಿತ ಪೈಲಟ್‌ಗಳಿಗೆ ಯಾವುದೇ ರೋಗ ಲಕ್ಷಣ ಕಂಡುಬಂದಿರಲಿಲ್ಲ. ಅವರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಂಕಿಗೆ ಒಳಗಾಗಿರುವ ಎಲ್ಲ ಐವರು ಪೈಲಟ್‌ಗಳು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಐವರು ಎಪ್ರಿಲ್ 20ರಂದು ಕೊನೆಯ ಬಾರಿ ವಿಮಾನ ಚಲಾಯಿಸಿದ್ದರು.
ಇತ್ತೀಚೆಗೆ ಚೀನಾದ ಗ್ವಾಂಗ್‌ಝೌಗೆ ತೆರಳಿದ್ದ ಕಾರ್ಗೊ ವಿಮಾನಗಳನ್ನು ಈ ಪೈಲಟ್‌ಗಳು ಚಲಾಯಿಸಿದ್ದರು.
ಲಾಕ್‌ಡೌನ್ ಘೋಷಣೆಯಾದ ಬಳಿಕ ಏರ್ ಇಂಡಿಯಾವು ಅಂತರ್-ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. ಈ ವಿಮಾನಗಳ ಪೈಕಿ ಎಪ್ರಿಲ್ 18ರಂದು ವೈದ್ಯಕೀಯ ಸಲಕರಣೆಗಳ ಸರಬರಾಜಿಗಾಗಿ ಬೋಯಿಂಗ್ 787 ವಿಮಾನಗಳು ಗ್ವಾಂಗ್‌ಝೌನಿಂದ ದಿಲ್ಲಿಗೆ ಹಾರಾಟ ನಡೆಸಿದ್ದವು. ಏರ್ ಇಂಡಿಯಾ ಏರ್‌ಲೈನ್ಸ್ ಶಾಂೈ ಹಾಗೂ ಹಾಂಕಾಂಗ್‌ಗೆ ಮೆಡಿಕಲ್ ಕಾರ್ಗೊಗಳ ನಿರ್ವಹಣೆ ನಡೆಸಿತ್ತು.
ಲಾಕ್‌ಡೌನ್ ವೇಳೆ ಏರ್‌ಇಂಡಿಯಾ ಏರ್‌ಲೈನ್ ಇಟಲಿ ಹಾಗೂ ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತ್ತು. ಇದೀಗ "ವಂದೇ ಮಾತರಂ ಮಿಶನ್'' ಕಾರ್ಯಕ್ರಮದಡಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ದೊಡ್ಡ ಕಾರ್ಯಾಚರಣೆ ನಡೆಯುತ್ತಿದೆ. ಮೇ 7ರಿಂದ ವಿದೇಶದಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮೊದಲ ವಾರದಲ್ಲಿ ಸುಮಾರು 15,000 ಭಾರತೀಯರನ್ನು ಕರೆ ತರಲು 64 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಗಲ್ಫ್ ಯುದ್ಧದ ಬಳಿಕ ಮೊದಲ ದೊಡ್ಡ ರಕ್ಷಣಾ ಕಾರ್ಯಾಚರಣೆ ಇದಾಗಿದೆ. ಇದೀಗ ಪೈಲಟ್‌ಗಳು ಕೂಡ ಕೊರೋನ ವೈರಸ್ ಸೋಂಕಿಗೆ ಬಲಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪೈಲಟ್‌ಗಳಿಗೆ ಆತಂಕ ಉಂಟು ಮಾಡಿದೆ. ಅತ್ಯಂತ ಹೆಚ್ಚು ಕೊರೋನ ಪೀಡಿತ ನ್ಯೂಯಾರ್ಕ್‌ನಲ್ಲಿ ಭಾರತದ ಪೈಲಟ್‌ಗಳು "ವಂದೇ ಮಾತರಂ ಮಿಶನ್'' ಅಡಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿದ್ದಾರೆ.