ಮೂರು ತಿಂಗಳು ಕಾರ್ಮಿಕರ ಪಿಎಫ್ ಹಣವನ್ನು ಕೇಂದ್ರ ಭರಿಸಲಿದೆ: ವಿತ್ತ ಸಚಿವೆ
ಹೊಸದಿಲ್ಲಿ, ಮೇ 13: ಮತ್ತೆ ಮೂರು ತಿಂಗಳು 15 ಸಾವಿರ ರೂ. ಒಳಗೆ ಸಂಬಳ ಇರುವ ನೌಕರರ ಪಿಎಫ್ ಖಾತೆಗೆ ತಕ್ಷಣವೇ ಕೇಂದ್ರ ಸರಕಾರ ಹಣ ಭರಿಸಲಿದೆ.
ಜೂನ್, ಜುಲೈ, ಆಗಸ್ಟ್ ತಿಂಗಳವರೆಗೆ ಕಂಪೆನಿ ಹಾಗೂ ನೌಕರರ ಪಾಲಿನ ತಲಾ ಶೇ. 10ರಷ್ಟು ಪಿಎಫ್ ಹಣವನ್ನು ಕೇಂದ್ರ ಸರಕಾರವೇ ಭರಿಸಲಿದ್ದು, ಇದರಿಂದ 3.67 ಲಕ್ಷ ಕಂಪೆನಿಗಳ 72.5 ಲಕ್ಷ ಕಾರ್ಮಿಕರಿಗೆ ಅನುಕೂಲಕರವಾಗಲಿದೆ. ಇದಕ್ಕಾಗಿ 2,500 ಕೋ.ರೂ. ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಈಗಾಗಲೇ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ನೌಕರರ ಪಿಎಫ್ ಹಣವನ್ನು ಭರಿಸಲಾಗಿದೆ. ಇದೀಗ ಈ ಯೋಜನೆಯನ್ನು ಜೂನ್‌ನಿಂದ ಆಗಸ್ಟ್ ತನಕ ವಿಸ್ತರಿಸಲಾಗಿದೆ.
Next Story