ಸಂಸತ್ತಿನ ಮತ್ತೊಬ್ಬ ಸಿಬ್ಬಂದಿಗೆ ಕೊರೋನ ಸೋಂಕು: ಕಚೇರಿಯಿರುವ ಮಹಡಿಗೆ ಸೀಲ್
ಹೊಸದಿಲ್ಲಿ : ರಾಜ್ಯಸಭಾ ಸೆಕ್ರಟೇರಿಯಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಿರುವ ಅಂತಸ್ತನ್ನು ಸೀಲ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಅಧಿಕಾರಿಯ ಪತ್ನಿ ಮತ್ತು ಮಕ್ಕಳಿಗೆ ಈಗಾಗಲೇ ಸೋಂಕು ತಗಲಿದೆ. ಈ ಅಧಿಕಾರಿಯ ಜತೆ ಸಂಪರ್ಕದಲ್ಲಿದ್ದ ಇತರರಿಗೆ ತಮ್ಮ ಆರೋಗ್ಯ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.
ಈ ನಿರ್ದಿಷ್ಟ ಅಧಿಕಾರಿ ಮೇ 12ರ ತನಕ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರಿದ್ದ ಕಚೇರಿ ಸಂಸತ್ತಿನ ಹತ್ತಿರದ ಕಟ್ಟಡದ ಐದನೇ ಅಂತಸ್ತಿನಲ್ಲಿದೆಯಲ್ಲದೆ ಹೆಚ್ಚಿನ ಸಂಸದೀಯ ಅಧಿಕಾರಿಗಳ ಕಚೇರಿ ಇಲ್ಲಿವೆ. ಸದನ ಸಮಿತಿ ಸಭೆಗಳ ಸಭಾಂಗಣಗಳೂ ಇದೇ ಕಟ್ಟಡದಲ್ಲಿವೆ.
ಸಂಸತ್ತಿನ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ತಗಲಿದೆ ಎರಡನೇ ಪ್ರಕರಣ ಇದಾಗಿದೆ. ಎಪ್ರಿಲ್ ತಿಂಗಳಲ್ಲಿ ಅಲ್ಲಿನ ಹಿರಿಯ ಹೌಸ್ ಕೀಪರ್‍ಗೆ ಕೊರೋನ ಸೋಂಕು ದೃಢಪಟ್ಟಿತ್ತು.
Next Story