ಇ-ಜಗತ್ತು
‘ಮಿತ್ರೋನ್’ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ಹೊರಕ್ಕೆ
ವಾರ್ತಾ ಭಾರತಿ : 2 Jun, 2020
ಹೊಸದಿಲ್ಲಿ: ಟಿಕ್ ಟೋಕ್ ಗೆ ಎದುರಾಳಿ ಎಂದು ಹೇಳಲಾಗುತ್ತಿದ್ದ ‘ಮಿತ್ರೋನ್’ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ.
ಈ ಆ್ಯಪನ್ನು ಪಾಕಿಸ್ತಾನದ ಡೆವಲಪರ್ ರಚಿಸಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಆ್ಯಪ್ ಗೂಗಲ್ ನ ‘ಸ್ಪ್ಯಾಮ್ ಮತ್ತು ಮಿನಿಮಮ್ ಫಂಕ್ಷನಾಲಿಟಿ’ಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ.
“ಗೂಗಲ್ ಪ್ಲೇನಲ್ಲಿರುವ ಇತರ ಆ್ಯಪ್ ಗಳು ನೀಡುವ ಅನುಭವವನ್ನೇ ಒದಗಿಸುವ ಆ್ಯಪ್ ಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಗೂಗಲ್ ಪ್ಲೇ ಸ್ಟೋರ್ ಪಾಲಿಸಿ ಹೇಳುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)