ಓ ಮೆಣಸೇ… !
ಬಿಜೆಪಿಯಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ - ಡಾ.ಅಶ್ವತ್ಥ್ಥನಾರಾಯಣ, ಉಪಮುಖ್ಯಮಂತ್ರಿ
ಹಾಗಾದರೆ ಎಲ್ಲರೂ ಲಕ ್ಷಣ ರೇಖೆಯ ಹೊರಗೇ ಇರಬೇಕು.
ಭಾರತದ ಅಂತರ್‌ರಾಷ್ಟ್ರೀಯ ಗಡಿ ನರೇಂದ್ರ ಮೋದಿ ನಾಯಕತ್ವದಲ್ಲಿ ಅತ್ಯಂತ ಸುರಕ್ಷಿತವಾಗಿದೆ - ಅಮಿತ್ ಶಾ, ಕೇಂದ್ರ ಸಚಿವ
ಗಡಿಯ ಒಳಗಿರುವವರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ.
ಗುಜರಾತ್, ಮುಂಬೈ ಹಾಗೂ ದಿಲ್ಲಿಯಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಲು ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಕಾರಣ- ಸಂಜಯ್ ರಾವತ್, ಶಿವಸೇನೆ ನಾಯಕ
‘ನಮಸ್ತೆ ಕೊೋನ’ ಎಂದೇ ಹೆಸರಿಡಬಹುದಿತ್ತು.
ಅಭಿವೃದ್ಧಿಯ ಕನಸುಹೊತ್ತು ಬಿಜೆಪಿಗೆ ಸೇರಿದ್ದೆ, ಈಗ ನೋಡಿದರೆ ಸರಕಾರದ ಬಳಿ ಹಣವೇ ಇಲ್ಲ - ಆನಂದ್‌ಸಿಂಗ್, ಸಚಿವ
ಹಣವೆಲ್ಲ ಆಪರೇಷನ್ ಕಮಲ ನಡೆಸಿ ಮುಗಿದಿದೆಯಂತೆ.
ಪಕ್ಷದೊಳಗೆ ಭಿನ್ನಮತ ಚಟುವಟಿಕೆ ಮಾಡಿದವರ ವಿರುದ್ಧ ಶಿ್ತು ಕ್ರಮಕೈಗೊಳ್ಳಲಾಗುವುದು - ನಳಿನ್‌ಕುಮಾರ್ ಕಟೀಲು, ಸಂಸದ
ಬೇರೆ ಪಕ್ಷದೊಳಗೆ ನಡೆಸಿದವರಿಗೆ ಸಚಿವ ಸ್ಥಾನ ನೀಡಲಾಗುತ್ತದೆಯಂತೆ.
ಯಡಿಯೂರಪ್ಪ ನಮ್ಮೆಲ್ಲರ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ - ವಿ.ಸೋಮಣ್ಣ, ಸಚಿವ
ಬರೇ ಒಂದು ಮಾತು ಸಾಕಾಗುತ್ತದೆಯೇ?
ಮುಂದಿನ ಮೂರು ವರ್ಷಗಳಲ್ಲಿ ಒಂದೇ ಒಂದು ದಿನವೂ ಮಿಸ್ ಆಗದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ -ಆರ್.ಅಶೋಕ್, ಸಚಿವ
ಮಿಸ್ಟರ್ ಹೋಗಿ ಮಿಸ್ ಆಗುವುದು ಕಷ್ಟ ಬಿಡಿ.
ಎಲ್ಲ ಕುಟುಂಬದಲ್ಲೂ ಗೊಂದಲ ಇರುವಂತೆ ನಮ್ಮ ಪಕ್ಷದಲ್ಲೂ ಗೊಂದಲ ಇರುವುದು ಸಹಜ - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮಂತಹ ಅಸಹಜ ನಾಯಕರಿರುವವರೆಗೆ ಇದೆಲ್ಲ ಸಹಜ.
ಸಿದ್ದರಾಮಯ್ಯ ಓರ್ವ ಜನನಾಯಕ, ಅವರಿರಬೇಕಾದ ಪಕ್ಷ ಬಿಜೆಪಿ - ಸಿ.ಟಿ.ರವಿ, ಸಚಿವ
ಯಡಿಯೂರಪ್ಪ ಬಿಜೆಪಿಯಲ್ಲಿ ಇರಬೇಕಾದವರು ಅಲ್ಲ ಎಂದರ್ಥವೇ?
ಕಳೆದ ಒಂದು ವರ್ಷದಲ್ಲಿ ಜನರ ಕನಸು ನನಸು ಮಾಡಿದ್ದೇನೆ - ನರೇಂದ್ರ ಮೋದಿ, ಪ್ರಧಾನಿ
ಜನರು ಕೊರೋನ ಕುರಿತಂತೆ ಕನಸು ಕಂಡಿದ್ದರು ಎಂದು ಹೇಳುತ್ತಿದ್ದೀರಾ?
ಸಚಿವ ರಮೇಶ್ ಜಾರಕಿಹೊಳಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಚಟವಿದೆ - ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಗಾಳಿಯಲ್ಲಿ ಹಾರಿಸಿದ ಗುಂಡು, ಈ ಹಿಂದೆ ಮೈತ್ರಿ ಸರಕಾದ ಎದೆಗೇ ಬಿದ್ದದ್ದು ನೆನಪಿದೆಯೇ?
ಯಡಿಯೂರಪ್ಪ ಮತ್ತು ನಳಿನ್‌ಕುಮಾರ್ ಕಟೀಲು ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ,ಸಚಿವ
ಒಂದು ನೀರಿಗೆ ಎಳೆದರೆ, ಮಗದೊಂದು ಏರಿಗೆ ಎಳೆಯುತ್ತಿದೆ.
ಅಮೆರಿಕದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಉಗ್ರರು - ರಾಬರ್ಟ್ ಓಬ್ರೇನ್, ಅಮೆರಿಕದ ಭದ್ರತಾ ಸಲಹೆಗಾರ
ಭಯೋತ್ಪಾದನೆಯ ವಿರುದ್ಧ ಹೋರಾಟ ಇದೀಗ ಅಮೆರಿಕದೊಳಗೇ ನಡೆಯುತ್ತಿದೆ ಅಂತೀರಾ?
ಕೇಂದ್ರ ಸರಕಾರ ಕಣ್ಣು, ಕಿವಿಮುಚ್ಚಿಕೊಂಡು ಬಾಯಿಮಾತ್ರ ತೆರೆಯುತ್ತಿದೆ. - ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಬಾಯಿ ತೆರೆಯುತ್ತಿರುವುದು ಕೊರೋನ ಪರಿಹಾರ ನಿಧಿಗಾಗಿ.
ನನ್ನನ್ನು ಮುಖ್ಯಮಂತ್ರಿ ಮಾಡುವ ಕುರಿತು ಚರ್ಚೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ - ಜಗದೀಶ್‌ಶೆಟ್ಟರ್, ಸಚಿವ
ರಾಜ್ಯದ ಗಮನಕ್ಕೆ ಬಂದಿರುವುದು ನೀವು ಹೇಳಿದ ಬಳಿಕ.
ಉಮೇಶ್ ಕತ್ತಿ ಬುತ್ತಿ ಭೋಜನ ಕೂಟದಲ್ಲಿ ರಾಜಕೀಯ ಚರ್ಚೆ ನಡೆದ ಮಾತ್ರಕ್ಕೆ ಅದನ್ನು ಭಿನ್ನಮತ ಎನ್ನಲಾಗದು - ಲಕ್ಷ್ಮಣ್ ಸವದಿ, ಉಪಮುಖ್ಯಮಂತ್ರಿ
ಬುತ್ತಿ ಭೋಜನದಲ್ಲಿ ಕತ್ತಿ ಯಾಕೆ?
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಕಳ್ಳ ಮಾರ್ಗದಲ್ಲಿ ಬಂದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು - ಬಸವರಾಜ ಬೊಮ್ಮಾಯಿ, ಸಚಿವ
ಭಾರತಕ್ಕೆ ಕೊರೋನ ಯಾವ ಮಾರ್ಗದಲ್ಲಿ ಬಂದದ್ದು ಎನ್ನುವುದನ್ನು ವಿವರಿಸಿ.
ಜನಸಾಮಾನ್ಯರಿಂದ ಕೆಟ್ಟವನು ಎನಿಸಿಕೊಳ್ಳುವಂತಹ ಕೆಲಸವಂತೂ ನಾನು ಯಾವತ್ತೂ ಮಾಡಿಲ್ಲ - ಮಾಧುಸ್ವಾಮಿ, ಸಚಿವ
ಮತ್ತೆ ಯಾರಿಂದ ಕೆಟ್ಟವನು ಎನಿಸಿಕೊಳ್ಳುವಂತಹ ಕೆಲಸ ಮಾಡಿದ್ದೀರಿ?
ಡಿ.ಕೆ.ಶಿವಕುಾರ್ ಮತ್ತು ನಾನು ದೋಸ್ತಿಗಳು -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅದಕ್ಕೆ ಸಾಕ್ಷಿಯಾಗಿ ಇಬ್ಬರ ಬೆನ್ನಲ್ಲೂ ಪರಸ್ಪರ ಇರಿದ ಗಾಯಗಳ ಗುರುತುಗಳಿವೆ.
ಔಷಧಿ ದೊರಕುವವರೆಗೆ ಕೊರೋನ ವೈರಸ್ ಜೊತೆ ಬದುಕುವುದು ಅನಿವಾರ್ಯ - ಡಾ. ಸುಧಾಕರ್, ಸಚಿವ
ಕೊರೋ ವೈರಸ್‌ಗೂ ಒಂದು ಆಧಾರ್ ಕಾರ್ಡ್ ಮಾಡಿಸಿ ಕೊಡಿ.
ಕೊರೋನ ಪಿಡುಗಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇದ್ದಿದ್ದರೆ ಕನಿಷ್ಠ 50 ಸಾವಿರ ಜನ ಸಾಯುತ್ತಿದ್ದರು
- ಎಚ್.ವಿಶ್ವನಾಥ್, ಮಾಜಿ ಸಚಿವ
ಅಂದರೆ ಆಪರೇಷನ್ ಕಮಲದ ಮೂಲಕ ಸಾಯಿಸುವ ಯೊೀಜನೆಗಳೇನಾದರೂ ನಿಮ್ಮಲ್ಲಿ ಇತ್ತೇ?
ಕೊರೋನ ಬಗ್ಗೆ ತಿಳಿದುಕೊಳ್ಳಲು ಕಾಮನ್‌ಸೆನ್ಸ್ ಇದ್ದರೆ ಸಾಲದು, ಜನರಲ್ ನಾಲೆಡ್ಜ್ ಕೂಡಾ ಇರಬೇಕು - ಬಿ.ಸಿ.ಪಾಟೀಲ್
ಅವೆರಡೂ ಇಲ್ಲದ ನಿಮ್ಮಂಥವರ ಗತಿ ಏನು?