‘ಸಮುದಾಯ ರಂಗ ಚಿಂತನ’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು, ಜೂ.11: 'ಸಮುದಾಯ ಬೆಂಗಳೂರು' ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮುಖೇನ 'ಸಮುದಾಯ ರಂಗ ಚಿಂತನ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಮುದಾಯ ರಂಗ ಚಿಂತನದಲ್ಲಿ ರಾಷ್ಟ್ರದ ಹಲವು ರಂಗ ತಜ್ಙರು, ರಂಗ ಚಿಂತಕರು ಮತ್ತು ರಂಗ ನಿರ್ದೇಶಕರು ಭಾಗವಹಿಸುತ್ತಿದ್ದು, ಪ್ರಸ್ತುತ ರಂಗಭೂಮಿಯ ಸಮಸ್ಯೆಗಳ ಕುರಿತು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲಿದ್ದಾರೆ. ಜೂ.10ರಿಂದಲೇ ಈ ಕಾರ್ಯಕ್ರಮ ಪ್ರಾರಂಭವಾಗಿದ್ದು, ಪ್ರತಿದಿನ ಸಂಜೆ ಏಳು ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್ಲೋಡ್ ಆಗಲಿದೆ.
ವೀಕ್ಷಣೆಗಾಗಿ ಸಮುದಾಯದ ಫೇಸ್ಬುಕ್ ಐಡಿ https://www.facebook.com/Samudaya-Ranga-Chinthana-109030734174865/ ಹಾಗೂ ಯೂಟ್ಯೂಬ್ ಐಡಿ https://youtu.be/zOmB9eO32E0 , https://youtu.be/3X99OllG69Q ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9901299228 ಹಾಗೂ 9448519079 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story