Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನುಗ್ಗೆ ಹೂವಿನ ಬಜ್ಜಿ

ನುಗ್ಗೆ ಹೂವಿನ ಬಜ್ಜಿ

ರಾಜೇಂದ್ರ ಪ್ರಸಾದ್ರಾಜೇಂದ್ರ ಪ್ರಸಾದ್15 Jun 2020 10:54 PM IST
share
ನುಗ್ಗೆ ಹೂವಿನ ಬಜ್ಜಿ

ಬೇಸಗೆಯ ಕಾಲಕ್ಕೂ ನುಗ್ಗೆಕಾಯಿಯ ಫಸಲು ಬರುವುದಕ್ಕೂ ಏನೋ ಅವಿನಾಭಾವ ಸಂಬಂಧವಿರಬೇಕು. ಪ್ರತಿವರ್ಷ ಬಿಸಿಲ ಝಳ ಹೆಚ್ಚಾದಂತೆಲ್ಲಾ ನುಗ್ಗೆಯ ಮಾರುಕಟ್ಟೆಯ ದರ ಕೂಡ ಏರುಪೇರು ಆಗುತ್ತಿರುತ್ತದೆ. ಅಲ್ಲದೆ ಈ ಹೊತ್ತಿನಲ್ಲಿ ನಡೆಯುವ ಮದುವೆ, ಮುಂಜಿ, ದೇವರ ಉತ್ಸವ, ಕಡೆಗೆ ಹೊಟೇಲ್‌ಗಳು ಎಲ್ಲ ಕಡೆಯೂ ಸಾರಿಗೆ ಹಾಕುವ ಏಕೈಕ ತರಕಾರಿ ‘ ನುಗ್ಗೆ ಕಾಯಿ’ ಆಗಿರುತ್ತದೆ. ಊಟಕ್ಕೆ ಕುಳಿತ ಜೀವ ಬಿಸಿಬಿಸಿ ಅನ್ನದ ಮೇಲೆ ಬಿದ್ದ ನುಗ್ಗೆಕಾಯಿಯ ತುಂಡು ಕಂಡೊಡನೆಯೇ ನಡುಗಲು ಶುರು ಮಾಡುತ್ತದೆ. ಬೇಸಿಗೆಯ ಝಳ ಒಂದು ಕಡೆಯಾದರೆ ನುಗ್ಗೆ ಉಂಟು ಮಾಡುವ ಅಂತರಂಗದ ಝಳ ಮತ್ತೊಂದು ಕಡೆ. ಎರಡೂ ಸೇರಿ ಬಟ್ಟೆ ನೆನೆಯುವಷ್ಟು ಬೆವತು ಹಣ್ಣಾಗಬೇಕಾಗುತ್ತದೆ. ನುಗ್ಗೆಯ ರುಚಿಗೆ, ಬಿಸಿಗೆ ಶರಣಾಗದೇ ಅನ್ಯ ಮಾರ್ಗವೇ ಇಲ್ಲ. ಸಾರಿನಲ್ಲಿ ಹದವಾಗಿ ಬೆಂದ ತೊಗರಿಬೇಳೆ ಮತ್ತು ಸಾರಿನಪುಡಿಯ ಜೊತೆಗೆ ಮಧ್ಯಮ ವಯಸ್ಸಿನ ನುಗ್ಗೆಕಾಯಿಯನ್ನು ಹಾಕಿಬಿಟ್ಟರೆ ಅದು ಬೆಣ್ಣೆಯ ಹಾಗೆ ಬೆಂದು ಬಾಯಲ್ಲಿ ಕರಗಿ ಹೋಗುತ್ತದೆ. ಕಾಯಿ ತುಂಡನ್ನು ಬಾಯಲ್ಲಿ ಕಚಕಚನೆ ತಿಂದು ರಸ ಹೀರುವುದು ಕೂಡ ಒಂದು ಕಲೆ.

ಹಲವರಿಗೆ ಈ ನುಗ್ಗೆ ಕಾಯಿ ತಿನ್ನಲು ಕೂಡ ಬರುವುದಿಲ್ಲ. ಅದೊಂದು ಮರದ ಬೆಂಡು ಎಂದು ಜರಿಯುವ ಜನರೂ ಉಂಟು. ಅದನ್ನು ಅಮೃತದಷ್ಟೇ ಸಮಾನವಾಗಿ ಸವಿಯುವ ಜನರೂ ಉಂಟು. ಇದೇ ಅಲ್ಲವೇ ಭಿನ್ನರುಚಿ. ದಕ್ಷಿಣ ಕರ್ನಾಟಕದ ಬೀದಿಬೀದಿಗಳಲ್ಲಿ ಸಾವಕಾಶ ಬೆಳೆದು ನಿಂತಿರುವ ನುಗ್ಗೆಯ ಮರಗಳಲ್ಲಿ ತೂಗುಬಿದ್ದ ವಿವಿಧ ತಳಿಯ ವಿವಿಧ ಗಾತ್ರದ ನುಗ್ಗೆಕಾಯಿಗಳನ್ನು ನೋಡಬಹುದು. ವರ್ಷವಿಡೀ ಸೋಪ್ಪಿನಿಂದ ಕಂಗೊಳಿಸುವ ನುಗ್ಗೆ ಋತುಮಾನ ಬಂದಾಗ ಹೂವು ಬಿಟ್ಟು ಕಾಯಿ ತಳೆದು ದಾರಿಹೋಕರ ಬಾಯಿ ಚಪ್ಪರಿಸುವ ಹಾಗೆ ಮಾಡುತ್ತದೆ. ಹಳೇ ಮೈಸೂರು ಭಾಗದ ಊರುಗಳಲ್ಲಿ, ನಗರಗಳಲ್ಲಿ ನುಗ್ಗೆಯ ಸಂತತಿ ಸಾವಿರ. ಅದನ್ನು ದಾಟಿ ಬೆಳೆದ ಮತ್ತೊಂದು ಮರವಿಲ್ಲ, ಬಳ್ಳಿಯಿಲ್ಲ. ಈ ಮರವು ಉರುವಲು ಅಥವಾ ಇನ್ನಾವುದೇ ಕಟ್ಟಡ ಸಂರಚನೆಯ ಕೆಲಸಗಳಿಗೆ ಬರುವುದಿಲ್ಲ ಎಂಬುದನ್ನು ಬಿಟ್ಟರೆ ಸೊಪ್ಪು, ಹೂವು, ಕಾಯಿ ಮತ್ತು ಇತರೆ ತೋಟದ ಬೆಳೆಗಳಿಗೆ ಆಸರೆಯಾಗೂ ಬೆಳಸಬಹುದು ( ಉದಾ: ಕಾಳು ಮೆಣಸು, ವೀಳ್ಯದೆಲೆ ಮುಂತಾಗಿ ). ಬಲಿತ ನುಗ್ಗೆಕಾಯಿಯ ಬೀಜದ ಎಣ್ಣೆಯನ್ನು ಕೂಡ ತಯಾರಿಸಬಹುದು.

ಆದರೆ ನಮಗೆ ಅಷ್ಟು ಸಂಯಮ ಇಲ್ಲ. ಕೃಷಿಯನ್ನು ಒಂದು ಸುಸ್ಥಿರ ಅಭಿವೃದ್ಧಿ ಮಾದರಿಯಾಗಿ ಬಳಸಿಕೊಂಡರೆ ಪರಿಸರ ವ್ಯವಸ್ಥೆಯಲ್ಲಿ ಮಾನವನ ಆರೋಗ್ಯದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗುತ್ತವೆ. ಆದರೆ ಧಾವಂತ ಬದುಕಿನಲ್ಲಿರುವ ನಮಗೆ ಮತ್ತು ಕೃಷಿಯನ್ನು ಖಾಸಗೀಕರಣಗೊಳಿಸಿ ಕಂಪೆನಿಗಳ ತೆಕ್ಕೆಗೆ ಹಾಕಲು ಕಾಯುತ್ತಿರುವ ಸರಕಾರಗಳಿಗೆ ಇಂತಹ ಸೃಷ್ಟಿಯ ಸೂಕ್ಷ್ಮವಿಚಾರಗಳು, ದರ್ಶನಗಳು ಎಲ್ಲಿಂದ ತಿಳಿಯಬೇಕು. ತಿಳಿಯುವ ಅವಕಾಶ ಒದಗಿದರೂ ಅದಕ್ಕೆ ಕಾಲಾವಕಾಶ ಅವರಲ್ಲಿ ಎಲ್ಲಿದೆ? ಎಲ್ಲವೂ ಧಾವಂತ! ಧಾವಂತ! ನುಗ್ಗೆ ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಹಿರೀಕರ ಅನುಭವದ ಮಾತು. ಅದಕ್ಕಾಗಿಯೇ ಅದನ್ನು ಮನೆಮನೆಯ ಮುಂದೆ ಅಥವಾ ಹಿತ್ತಿಲಿನಲ್ಲಿ, ತೋಟದಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಬೆಳೆಸಲು ಉತ್ಸಾಹ ತೋರುತ್ತಿದರು. ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣಾಂಶ ಇರುವುದರಿಂದ ಮೂಳೆಗಳ ಬೆಳವಣಿಗೆ ಮತ್ತು ಸ್ಥಿರತೆಗೆ ಉತ್ತಮ, ಅಲ್ಲದೆ ಮಿಟಮಿನ್ ‘ಸಿ’ ಶೀತ ಅಸ್ತಮಾ ಸೇರಿದಂತೆ ಉಸಿರಾಟ ಸಮಸ್ಯೆಗಳ ಪರಿಹಾರಕ್ಕೆ ನುಗ್ಗೆಯ ಸೊಪ್ಪು ಮತ್ತು ಕಾಯಿ ಒಳ್ಳೆಯ ಆಹಾರ ಎಂದು ಆಹಾರ ತಜ್ಞರು ಕೂಡ ಶಿಫಾರಸು ಮಾಡುತ್ತಾರೆ. ಆದರೆ ಇದು ಇಂತಹದಕ್ಕೆ ಒಳ್ಳೆಯದು ಅಂತಲೇ ಪದಾರ್ಥಗಳನ್ನು ಆಯ್ಕೆ ಮಾಡಿ ಸೇವಿಸುವುದು ಆಹಾರ ಅನಿಸಿಕೊಳ್ಳುವುದಿಲ್ಲ, ಔಷಧ ಎನಿಸಿಕೊಳ್ಳುತ್ತದೆ. ನಮಗೆ ಆಹಾರ ಅನ್ನುವುದು ಬಹುತರವಾದ ವೈವಿಧ್ಯಮಯ ಪ್ರಪಂಚ. ಅಲ್ಲಿ ಎಲ್ಲ ತರಹದ ರುಚಿಗಳೂ ಉಂಟು, ಅದರಲ್ಲಿ ಔಷಧ ರುಚಿಯೂ ಒಂದು. ನುಗ್ಗೆ ಮಾರುಕಟ್ಟೆಯಲ್ಲಿ ಸದಾ ದೊರೆಯುವ ತರಕಾರಿಯಲ್ಲ. ಆಗಾಗ್ಗೆ ಋತುಮಾನದಲ್ಲಿ ಸಿಗುವ ನುಗ್ಗೆಕಾಯಿಯನ್ನು ಬಿಟ್ಟರೆ ಅದಕ್ಕಿಂತ ಹೆಚ್ಚು ಬಳಕೆಯಾಗುವುದು ಆಯಾ ಮನೆಯವರು ಬೆಳೆದುಕೊಂಡ ಸ್ವಂತದ ನುಗ್ಗೆಯ ಗಿಡ ಅಥವಾ ಮರದ ಸೊಪ್ಪು. ನುಗ್ಗೆ ಸೊಪ್ಪಿನ ಉಪ್ಸಾರು ಮಂಡ್ಯ ಭಾಗದಲ್ಲಿ ಬಹಳ ಜನಪ್ರಿಯ.

ಅದರ ಜೊತೆಗೆ ಸೊಪ್ಪನ್ನು ಪ್ರತ್ಯೇಕವಾಗಿ ಎಣ್ಣೆಯಲ್ಲಿ ಈರುಳ್ಳಿ, ಹಸಿಮೆಣಸಿನಕಾಯಿ ಜೊತೆಗೆ ಹುರಿದು ಕಾಯಿತುರಿ ಮತ್ತು ಮೊಟ್ಟೆಯನ್ನು ಸೇರಿಸಿ ಬೇಯಿಸಿ ಪಲ್ಯ ಮಾಡಿದರೆ ಬಹಳ ರುಚಿಯಾಗಿರುತ್ತದೆ. ವಾರದಲ್ಲಿ ಒಮ್ಮೆಯಾದರೂ ನುಗ್ಗೆಸೊಪ್ಪಿನ ಪಲ್ಯ ಕಡ್ಡಾಯ ಈ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಮೊಟ್ಟೆ ಹಾಕಿದ ಪಲ್ಯವಂತೂ ಬಹಳ ಜನಪ್ರಿಯ. ಹಾಗೆಯೇ ಈರುಳ್ಳಿ ಬೋಂಡ ಮಾಡುವಾಗ ಒಂದು ಹಿಡಿ ಹಚ್ಚಿದ ನುಗ್ಗೆ ಸೊಪ್ಪಿನ ಮಿಶ್ರಣ ರುಚಿಯಾಗಿರುತ್ತದೆ. ಆಮ್ಲೆಟ್ ಅಥವಾ ರೊಟ್ಟಿ / ತಾಲಿಪಟ್ಟು ಮಾಡುವಾಗ ಕೂಡ ಈ ಸೊಪ್ಪನ್ನು ಸಣ್ಣಗೆ ಹಚ್ಚಿ ಹಾಕಬಹುದು. ಇನ್ನು ನುಗ್ಗೆ ಕಾಯಿಯಿಂದ ಹೆಚ್ಚು ಮಾಡುವುದು ಬೇಳೆ ಬೇಯಿಸಿದ ಸಾರು. ಇದನ್ನಂತೂ ನಾವೆಲ್ಲಾ ತಿನ್ನುತ್ತಲೇ ಇರುತ್ತೇವೆ. ಇದರಲ್ಲಿ ಆಸಕ್ತಿಕರವಾದ ಅಡುಗೆಯೆಂದರೆ ‘ನುಗ್ಗೆಕಾಯಿ ಚಾಪ್ಸ್’. ಬೆರಳು ಉದ್ದಕೆ ಕತ್ತರಿಸಿಕೊಂಡು ನುಗ್ಗೆಕಾಯಿಗಳನ್ನು ಚಿಕನ್ ಅಥವಾ ಮಟನ್ ವಿಧಾನದಲ್ಲಿ ಬೇಯಿಸಿಕೊಂಡ ಮಸಾಲೆ ಒಳಕ್ಕೆ ಹಾಕಿ ಒಂದಷ್ಟು ಬೇಯಿಸಿದರೆ ಚಾಪ್ಸ್ ರೆಡಿಯಾಗುತ್ತದೆ. ಇದರ ಹಸಿಯಲ್ಲಿ ಅನ್ನ ತಿನ್ನುವುದೇ ಒಂದು ಮಜಾ. ಹಾಗೆಯೇ ನುಗ್ಗೆಕಾಯಿಯನ್ನು ಚೆನ್ನಾಗಿ ಬೇಯಿಸಿ ಮಿತವಾದ ಉಪ್ಪು, ನಿಂಬೆ ಹುಳಿ, ಕಾಳುಮೆಣಸಿನ ಪುಡಿ ಕಲಸಿ ಒಳ್ಳೆಯ ಸೂಪ್ ಮಾಡಬಹುದು. ಗಟ್ಟಿಯಾದ ಈ ಸೂಪ್ ಚಳಿಗಾಲದಲ್ಲಿ ಕುಡಿಯಲು ಬಹಳ ಚೆಂದ ಹಾಗೆಯೇ ಅವಾಗ ದೇಹವನ್ನು ಬೆಚ್ಚಗಿಡುತ್ತದೆ ಕೂಡ.

ನುಗ್ಗೆ ಸೊಪ್ಪು, ಕಾಯಿ ಬಿಟ್ಟರೆ ವಿಶೇಷವಾದ ಇನ್ನೊಂದು ಪದಾರ್ಥವೆಂದರೆ ‘ನುಗ್ಗೆ ಹೂವು’. ಈ ಹೂವನ್ನು ತೊಳೆದು ಸೊಪ್ಪಿನ ಪಲ್ಯಕ್ಕೆ ಸೇರಿಸುವುದುಂಟು. ಇಲ್ಲದೆ ಹೋದರೆ ಅರಳಿದ ಹೂವುಗಳನ್ನು ತೊಳೆದು ಈಗಾಗಲೇ ಸಿದ್ಧ್ದ ಮಾಡಿಟ್ಟಿರುವ ಬಜ್ಜಿಯ ಹಿಟ್ಟಿಗೆ ಅದ್ದಿ ಎಣ್ಣೆಯು ಕಾದ ಬಾಣಲೆಗೆ ಹಾಕಿ ಕೆಲವೇ ಸೆಕೆಂಡುಗಳಲ್ಲಿ ತೆಗೆಯಬೇಕು. ಗರಿಗರಿಯಾಗಿ ಕರಿದ ಹೂವಿನ ಬಜ್ಜಿ ತಿನ್ನಲು ಒಳ್ಳೆಯ ರುಚಿ ಕೊಡುತ್ತದೆ. ಹೀಗೆ ಕರಿದ ಹೂವನ್ನು ಸಣ್ಣಗೆ ಹಚ್ಚಿದ ನಾಟಿ ಈರುಳ್ಳಿ, ಹಸಿಮೆಣಸಿನಕಾಯಿ, ಚೂರು ಕಾಳುಮೆಣಸು, ಎರಡೇ ಕಡ್ಡಿ ಕೊತ್ತಂಬರಿ ಸೊಪ್ಪಿನ ಜೊತೆಗೆ ಕಲಸಿ ಒಳ್ಳೆಯ ಸಲಾಡ್ ಮಾಡಬಹುದು. ಅಂದಹಾಗೆ ಕ್ಯೂಬಾದ ಬಹುಕಾಲದ ಅಧ್ಯಕ್ಷರಾಗಿದ್ದ ಫಿಡಲ್ ಕ್ಯಾಸ್ಟ್ರೋಗೆ ನುಗ್ಗೆಕಾಯಿಯ ಸೂಪ್ ಬಹಳ ಇಷ್ಟವಾಗಿತ್ತಂತೆ. ಅವರೊಮ್ಮೆ ಅನಾರೋಗ್ಯ ಪೀಡಿತರಾಗಿದ್ದಾಗ ನುಗ್ಗೆಕಾಯಿಯ ಸೇವನೆಯಿಂದ ಚೇತರಿಸಿಕೊಂಡಿದ್ದರ ಪರಿಣಾಮ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿ ನುಗ್ಗೆಕಾಯಿ ಆಮದು ಮಾಡಿಕೊಳ್ಳುವುದರ ಜೊತೆಗೆ, ಕ್ಯೂಬಾದಲ್ಲೂ ಬೇಕಾದಷ್ಟು ನುಗ್ಗೆ ಸಸಿಗಳನ್ನು ನೆಟ್ಟರಂತೆ. ಇವತ್ತಿಗೂ ಭಾರತವೇ ಪ್ರಪಂಚದ ಶೇ. 80 ರಷ್ಟು ಭಾಗ ನುಗ್ಗೆಯನ್ನು ರಪ್ತು ಮಾಡುವ ದೇಶವಾಗಿದೆ. ನುಗ್ಗೆಯು ಕಾಮೋತ್ತೇಜಕ ಎಂಬುದು ಪುರಾತನ ನಂಬುಗೆ. ಅದನ್ನು ಅಲ್ಲಗೆಳೆಯುವಂತಿಲ್ಲ, ತಿಂದು ಅನುಭವಿಸಿದವರು ಬಲ್ಲರು! ಅದಕ್ಕೆ ಈ ಕವಿತೆಯನ್ನು ಓದಿರಿ.. ನುಗ್ಗೆ ಸ್ತೋತ್ರಾವಳಿ

- - - - - - - - - -
ಬೇಸಗೆಯ ಬಾಳು ದಿನವೂ ದಯಾಮರಣ

ಇರುಳು ಸರಸವೋ ಇನ್ನೊಂದು ಪ್ರಾಣಹರಣ! ಅದೋ

ಬೇಯುತ್ತಿರುವ ನುಗ್ಗೆಯದು ಹೆಮ್ಲಾಕು ವಿಷ ಎಲ್ಲಿಂದ ತರಲೋ ಜೀವ ತಣಿವ ರಾಮರಸ;
ಮದುಮೋ ಮುಂಜಿಯೋ ತಿಥಿಯೋ
ಎಲ್ಲೆಲ್ಲೂ ಮುಗಿಯದ ನುಗ್ಗೆಯ ಮೊವಣಿಗೆ .
ಇದೋ
ಹುಡುಗು ಜೀವಗಳು ಉಂಡು ಉರುಳುತ್ತಿವೆ
ಉರಿಯ ಕಡಲ ಕಿನಾರೆಗೆ ನಿಮಿರುವ ನರಳಾಟ
ಮಿಂಚು ಮೈ ತುಂಬಿ ನೆರೆಬಂದು ನರಸಂಚಾರ
ಥಟ್ಟನೆ ಜಾರಿಹೋದ ಕನಸಿನ ಬಿಂದು ಸಾಕಾರ.

ಬೇಸಗೆಯ ಬಾಯಿ ಒಣಗಿಹೋದ ಬಾವಿ ಅರಸಿ ಅರಸಿ ಅಡವಿ ಪಾಲು ಕಾಮಸಂಜೀವಿನಿ
ಅಲ್ಲಲ್ಲಿ ಅರಳಿ ಘಮಗುಡುವ ಕಾಮಕಸ್ತೂರಿ!

share
ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್
Next Story
X