ಆಪ್ ಶಾಸಕಿ ಅತಿಷಿಗೆ ಕೊರೋನ ವೈರಸ್ ಸೋಂಕು ದೃಢ
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಶಾಸಕಿ ಮತ್ತು ರಾಷ್ಟ್ರೀಯ ವಕ್ತಾರೆ ಅತಿಷಿಯವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
“ಕೊರೋನ ವಿರುದ್ಧದ ಹೋರಾಟದಲ್ಲಿ ಅತಿಷಿ ಜಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಗುಣಮುಖರಾಗುತ್ತಾರೆ ಮತ್ತು ಮತ್ತೊಮ್ಮೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ” ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Next Story