ಭಾರತವು ವಿಶೇಷವಾಗಿ ಚೀನಾದಿಂದ ಆಮದು ಕಡಿಮೆ ಮಾಡಬೇಕು: ಬಿಜೆಪಿ ನಾಯಕ ರಾಮ್ ಮಾಧವ್
ಹೊಸದಿಲ್ಲಿ,ಜೂ.18: ಭಾರತವು ಇತರ ದೇಶಗಳಿಂದ,ವಿಶೇಷವಾಗಿ ಚೀನಾದಿಂದ ಆಮದು ಕಡಿಮೆ ಮಾಡಬೇಕು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಅವರು ಗುರುವಾರ ಆಗ್ರಹಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,‘ನಾವು ರಾಸಾಯನಿಕಗಳು,ಮೊಬೈಲ್ ಫೋನ್ ಭಾಗಗಳು ಮತ್ತು ಬಟನ್ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅವುಗಳ ಆಮದು ಅಗತ್ಯವಿದೆಯೇ? ಅವುಗಳನ್ನು ಭಾರತದಲ್ಲಿಯೇ ತಯಾರಿಸಬಹುದು,ಆ ಸಾಮರ್ಥ್ಯವೂ ನಮಗಿದೆ ’ಎಂದು ಹೇಳಿದರು.
ಜನರು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಲು ಬಯಸಿದ್ದರೆ ಅವರ ಭಾವನೆಗಳನ್ನು ಗೌರವಿಸಬೇಕು ಎಂದರು.
ಭಾರತ-ಚೀನಾ ನಡುವಿನ ಪ್ರಸಕ್ತ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿದ ಅವರು,ಗಡಿಯಲ್ಲಿ ಇನ್ನಷ್ಟು ಹಿಂಸೆ ಮತ್ತು ಜೀವಹಾನಿಯನ್ನು ತಪ್ಪಿಸಲು ಕಟ್ಟೆಚ್ಚರದಿಂದ ಗಡಿಗಳ ರಕ್ಷಣೆ ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
Next Story