ಸೂರ್ಯಗ್ರಹಣದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕನಿಗೆ ಕೊರೋನ ಸೋಂಕು
ಚಂಡೀಗಢ, ಜೂ.29: ಈ ವರ್ಷದ ಪ್ರಥಮ ಸೂರ್ಯಗ್ರಹಣದ ಸಂದರ್ಭ ನಡೆಸಲಾದ ವಿಶೇಷ ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದ ಹರ್ಯಾಣದ ಬಿಜೆಪಿ ಶಾಸಕರೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 21ರಂದು ಸಂಭವಿಸಿದ್ದ ಸೂರ್ಯಗ್ರಹಣದ ಸಂದರ್ಭ ಕುರುಕ್ಷೇತ್ರದಲ್ಲಿ ವಿಶೇಷ ಪೂಜೆಯ ಸಹಿತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಹರ್ಯಾಣದ ಬಿಜೆಪಿ ಶಾಸಕ, ಸ್ಥಳೀಯರು, ಪತ್ರಕರ್ತರು, ಸಂತರ ಸಹಿತ ಸುಮಾರು 200 ಜನ ಪಾಲ್ಗೊಂಡಿದ್ದರು. ಆ ಬಳಿಕ ಶಾಸಕನಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರ್ಗಾಂವ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ರವಿವಾರ ಕೊರೋನ ಸೋಂಕು ಪರೀಕ್ಷೆಯಲ್ಲಿ ಪೊಸಿಟಿವ್ ವರದಿ ಬಂದಿದೆ. ಈಗ ಶಾಸಕನ ಕುಟುಂಬದವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story