ಇನ್ನು ಮುಂದೆ ಕ್ಯೂಆರ್ ಕೋಡ್ ಮೂಲಕ ಕಾಂಟಾಕ್ಟ್ ಸೇವ್ ಮಾಡಿ
ವಾಟ್ಸ್ಯಾಪ್ ನಿಂದ ಹೊಸ ಫೀಚರ್
ಕಳೆದ ವಾರ ಡಾರ್ಕ್ ಮೋಡ್, ಸ್ಟೇಟಸ್ ಸಪೋರ್ಟ್ ನಂತಹ ಫೀಚರ್ ಗಳನ್ನು ಹೊರತಂದಿದ್ದ ವಾಟ್ಸ್ ಆ್ಯಪ್ ಈ ಬಾರಿ ಕಾಂಟಾಕ್ಟ್ ಸೇವ್ ಮಾಡಲು ಕ್ಯೂ ಆರ್ ಕೋಡ್ ಫೀಚರನ್ನು ಬಳಕೆದಾರರಿಗೆ ನೀಡಿದೆ.
ಈ ಮೂಲಕ ಇನ್ನು ಮುಂದೆ ಬಳಕೆದಾರರು ಬೇರೆಯವರ ಕಾಂಟಾಕ್ಟನ್ನು ಸುಲಭವಾಗಿ ಸೇವ್ ಮಾಡಿಕೊಳ್ಳಬಹುದಾಗಿದೆ.
ಇದರ ಬಳಕೆ ಹೇಗೆ?
ಯೂಸರ್ ಪ್ರೊಫೈಲ್ ಬದಿಯಲ್ಲೇ ನಿಮಗೆ ಕ್ಯೂ ಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ಸೆಟ್ಟಿಂಗ್ ಮೆನುವಿನಲ್ಲಿ ನಿಮ್ಮ ಪ್ರೊಫೈಲ್ ನೇಮ್ ಮತ್ತು ಪಿಕ್ಚರ್ ಸಮೀಪದಲ್ಲೇ ಕ್ಯೂ ಆರ್ ಕೋಡ್ ಆಪ್ಶನ್ ಕೂಡ ಇದೆ. ನೀವು ಕ್ಯೂ ಆರ್ ಕೋಡ್ ಐಕಾನ್ ಮೇಲೆ ಟ್ಯಾಪ್ ಮಾಡಿದಾಗ ಹೊಸ ಟ್ಯಾಬ್ ತೆರೆಯುತ್ತದೆ. ಅದರೊಳಗೆ ನಿಮ್ಮ ಕ್ಯೂ ಆರ್ ಕೋಡ್ ಇದ್ದು ಅದನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
ಕ್ಯೂಆರ್ ಕೋಡ್ ಸಮೀಪ ಸ್ಕ್ಯಾನ್ ಆಪ್ಶನ್ ಇದ್ದು, ಅದನ್ನು ಟ್ಯಾಪ್ ಮಾಡಿದರೆ ಕ್ಯಾಮರಾ ತೆರೆಯುತ್ತದೆ. ಅದನ್ನು ಬೇರೆಯವರ ಕ್ಯೂ ಆರ್ ಕೋಡ್ ಮೇಲೆ ಸ್ಕ್ಯಾನ್ ಮಾಡಬಹುದು. ನೀವು ಒಮ್ಮೆ ನಿಮ್ಮ ಸ್ನೇಹಿತರ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅವರ ಕಾಂಟಾಕ್ಟ್ ನಿಮ್ಮ ಮೊಬೈಲ್ ನಲ್ಲಿ ಸೇವ್ ಆಗುತ್ತದೆ.