ನಾನು ಬಿಜೆಪಿ ಸೇರುತ್ತಿಲ್ಲ, ಈಗಲೂ ಕಾಂಗ್ರೆಸ್ನಲ್ಲಿದ್ದೇನೆ: ಸಚಿನ್ ಪೈಲಟ್
ಹೊಸದಿಲ್ಲಿ, ಜು.15: ಬಂಡಾಯ ಬಾವುಟ ಹಾರಿಸುವ ಮೂಲಕ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಪತನದಂಚಿಗೆ ತಂದಿರುವ ಯುವ ನಾಯಕ ಸಚಿನ್ ಪೈಲಟ್, ನಾನು ಬಿಜೆಪಿಗೆ ಸೇರುತ್ತಿಲ್ಲ. ನಾನೀಗಲೂ ಕಾಂಗ್ರೆಸ್ನಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.
ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ಬಿಜೆಪಿಗೆ ಸೇರುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನನ್ನು ಬಿಜೆಪಿಗೆ ಲಿಂಕ್ ಮಾಡುವ ಮೂಲಕ ಕೆಣಕುವ ಪ್ರಯತ್ನ ನಡೆಯುತ್ತಿದೆ ಎಂದು 42ರ ಹರೆಯದ ಪೈಲಟ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ನಾನು ಈಗಲೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದೇನೆ. ನಾನು ಇನ್ನಷ್ಟೇ ಭವಿಷ್ಯದ ಬಗ್ಗೆ ನಿರ್ಧರಿಸಬೇಕಾಗಿದೆ. ನಾನು ರಾಜಸ್ಥಾನ ಜನತೆಯ ಸೇವೆ ಮಾಡಲು ಬಯಸಿದ್ದೇನೆ ಎಂದು ರಾಜಸ್ಥಾನದ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಮರುದಿನ ಪೈಲಟ್ ಹೇಳಿದ್ದಾರೆ.
Next Story