ಬೆಂಗಳೂರು: ಸೂಕ್ತ ಚಿಕಿತ್ಸೆ ಸಿಗದೆ ಆರೋಗ್ಯಾಧಿಕಾರಿಯ ಕುಟುಂಬದ ಮೂವರು ಕೋವಿಡ್ ಗೆ ಬಲಿ; ಆರೋಪ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.23: ಕೊರೋನ ಸೋಂಕಿನಿಂದ ಬಿಬಿಎಂಪಿ ಆರೋಗ್ಯಾಧಿಕಾರಿಯ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದು, ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿಯ ಆರೋಗ್ಯಾಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ, ಹಾಗೂ 49 ವರ್ಷದ ಮಾವ ಕೊರೋನ ಸೋಂಕು ತಗಲಿ ಮೃತಪಟ್ಟಿದ್ದಾರೆ.
ಆರೋಗ್ಯಾಧಿಕಾರಿಯ ಮಾವ ಕೂಡಾ ವೃತ್ತಿಯಲ್ಲಿ ವೈದ್ಯರಾಗಿದ್ದವರು, ಆದರೆ ಖಾಸಗಿ ಆಸ್ಪತ್ರೆಗಳು ಈ ವೈದ್ಯ ಕುಟುಂಬಕ್ಕೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಮೂವರು ಮೃತರಾಗಿದ್ದಾರೆ ಎನ್ನಲಾಗಿದೆ. ಸದ್ಯ ಆರೋಗ್ಯಾಧಿಕಾರಿಯು ಸಹ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story