‘ಪಬ್ ಜಿ’ ಪ್ರಿಯರಿಗೆ ಆಘಾತಕಾರಿ ಸುದ್ದಿ ನೀಡಲಿದೆಯೇ ಸರಕಾರ?
ಹೊಸದಿಲ್ಲಿ: ಇತ್ತೀಚೆಗಷ್ಟೇ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದ್ದ ಸರಕಾರ ಇಂದು ಮತ್ತೆ 47 ಆ್ಯಪ್ ಗಳನ್ನು ನಿಷೇಧಿಸಿದೆ. ಇದೀಗ ಕೆಲ ಮಾಧ್ಯಮಗಳು ವರದಿ ಮಾಡಿದಂತೆ ಸರಕಾರ ‘ಪಬ್ ಜಿ’ಯನ್ನು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಸರಕಾರವು ಬಳಕೆದಾರರ ಖಾಸಗಿತನ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಕಾರಣಕ್ಕಾಗಿ ಇತರ 200 ಆ್ಯಪ್ ಗಳನ್ನು ಪರಿಶೀಲಿಸುತ್ತಿದ್ದು, ಅಗತ್ಯಬಿದ್ದರೆ ಈ ಎಲ್ಲಾ ಆ್ಯಪ್ ಗಳನ್ನು ನಿಷೇಧಿಸಲಿದೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ವಿಶ್ವಪ್ರಸಿದ್ಧ ಗೇಮಿಂಗ್ ಆ್ಯಪ್ ‘ಪ್ಲೇಯರ್ ಅನ್ ನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಅಥವಾ ಪಬ್ ಜಿಯೂ ಇದೆ ಎಂದು ವರದಿಯಾಗಿದೆ.
ದೇಶಾದಲ್ಲಿ ಲಕ್ಷಾಂತರ ಜನರು ಪಬ್ ಜಿ ಪ್ರಿಯರಾಗಿದ್ದಾರೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ. ಆದರೆ ಪಬ್ ಜಿ ನಿಷೇಧದ ಕುರಿತು ಸರಕಾರದ ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿಲ್ಲ.
Next Story