‘ಟಿಕ್ ಟಾಕ್’ನಲ್ಲಿ ಹೂಡಿಕೆಗೆ ರಿಲಯನ್ಸ್ ಜತೆ ‘ಬೈಟ್ ಡಾನ್ಸ್’ ಮಾತುಕತೆ
ಹೊಸದಿಲ್ಲಿ: ತನ್ನ ಆ್ಯಪ್ ‘ಟಿಕ್ ಟಾಕ್’ನ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಕುರಿತಂತೆ ಚೀನಾದ ತಂತ್ರಜ್ಞಾನ ಸಂಸ್ಥೆ ಬೈಟ್‍ಡಾನ್ಸ್ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಜತೆ ಆರಂಭಿಕ ಹಂತದ ಮಾತುಕತೆಗಳನ್ನು ನಡೆಸುತ್ತಿದೆ.
ಎರಡು ಕಂಪೆನಿಗಳೂ ಕಳೆದ ತಿಂಗಳ ಅಂತ್ಯದ ವೇಳೆಗೆ ಮಾತುಕತೆಗಳನ್ನು ಆರಂಭಿಸಿದ್ದರೂ ಇನ್ನೂ ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ ಎಂದು ವರದಿಯೊಂದು ತಿಳಿಸಿದೆ.
ಈ ಬೆಳವಣಿಗೆಯ ಕುರಿತಂತೆ ರಿಲಯನ್ಸ್, ಬೈಟ್‍ಡಾನ್ಸ್ ಯಾ ಟಿಕ್ ಟಾಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಿಕ್ ಟಾಕ್ ಸಹಿತ 59 ಚೀನೀ ಆ್ಯಪ್‍ಗಳನ್ನು ಭಾರತ ಸರಕಾರ ಕಳೆದ ತಿಂಗಳು ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಟಿಕ್ ಟಾಕ್ ನ ಅಮೆರಿಕಾದಲ್ಲಿನ ವ್ಯವಹಾರಗಳನ್ನು ತನ್ನದಾಗಿಸಿಕೊಳ್ಳಲು ಮೈಕ್ರೋಸಾಫ್ಟ್ ಮಾತುಕತೆ ನಡೆಸುತ್ತಿದ್ದರೆ, ಟ್ವಿಟ್ಟರ್ ಕೂಡ ಟಿಕ್ ಟಾಕ್ ಜತೆ ಒಪ್ಪಂದಕ್ಕೆ ಉತ್ಸುಕವಾಗಿದೆ.
Next Story