ಝಲಕ್
ಆ ಚಿಂತಕ!
ವಾರ್ತಾ ಭಾರತಿ : 3 Oct, 2020
-ಮಗು

ಮೊದಲು ಆ ಚಿಂತಕನನ್ನು ಕೊಲ್ಲಲಾಯಿತು. ಬಳಿಕ ಆತನ ಕೃತಿಗಳನ್ನು ಹಂತಹಂತವಾಗಿ ನಾಶ ಮಾಡಲಾಯಿತು.
ಅನಂತರ ಆ ಚಿಂತಕನ ಕುರಿತಂತೆ ಮಾತನಾಡುವವರ ನಾಲಗೆಗಳನ್ನು ಕತ್ತರಿಸಲಾಯಿತು.
ಹಲವರನ್ನು ಜೈಲಿಗೆ ತಳ್ಳಿ ಶಾಶ್ವತವಾಗಿ ದಫನಮಾಡಲಾಯಿತು.
ಚಿಂತಕನ ವಿಚಾರಗಳನ್ನು ಬೇರು ಸಹಿತ ಕಿತ್ತು ಹಾಕಲಾಯಿತು.
ಎಲ್ಲ ಆದ ಬಳಿಕ....
ಆ ಚಿಂತಕನ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಯಿತು. ಆ ಚಿಂತಕನ ಪ್ರತಿಮೆಯ ಅಡಿಯಲ್ಲಿ ಬೃಹತ್ ಜಾತ್ರೆಗೆ ಸರಕಾರ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿತು. ಚಿಂತಕನ ಅನುಯಾಯಿಗಳೆಲ್ಲ ಈಗ ಸಂಭ್ರಮಿಸಿದರು. ಸರಕಾರಕ್ಕೆ ಚಿಂತಕನ ಮೇಲಿರುವ ಪ್ರೀತಿಯನ್ನು ಕೊಂಡಾಡಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)