ರಾಜ್ಯದಲ್ಲಿ ಒಂದೇ ದಿನ ಲಕ್ಷ ಕೋವಿಡ್ ಪರೀಕ್ಷೆ: ಸಚಿವ ಡಾ. ಸುಧಾಕರ್
ಶೀಘ್ರವೇ ಈ ಪ್ರಮಾಣ 1.5 ಲಕ್ಷಕ್ಕೆ ಏರಿಕೆ ಗುರಿ
ಬೆಂಗಳೂರು, ಅ.7: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ಲಕ್ಷ ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಮಂಗಳವಾರ ಒಂದೇ ದಿನ 1,04,348 ಕೋವಿಡ್ ಟೆಸ್ಟ್ ನಡೆಸುವ ಮೂಲಕ ಈ ಹಿಂದೆ ಹೇಳಿದಂತೆ ನಿಗದಿತ ಗುರಿ ತಲುಪಿದ್ದೇವೆ.
ರಾಜ್ಯಾದ್ಯಂತ ಇರುವ 146 ಲ್ಯಾಬ್ಗಳ ಮೂಲಕ 55,690 ಆರ್ಟಿಪಿಸಿಆರ್ ಹಾಗೂ 48,658 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲಾಗಿದೆ. ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ.
Karnataka conducted 1,04,348 Covid tests in a single day on Tuesday. 55,690 RT-PCR & other method tests were conducted across 146 labs in the state & 48,658 Rapid Antigen Tests were conducted across 30 districts. We will soon increase the tests to 1.5 lakh per day.@PMOIndia
— Dr Sudhakar K (@mla_sudhakar) October 7, 2020