ಕಾರ್ಕಳ : ಬಂಡೀಮಠದ ಬಳಿ ನಂದಿನಿ ಕ್ಷೀರಮಳಿಗೆ ಲೋಕಾರ್ಪಣೆ
ಕಾರ್ಕಳ, ಅ. 22: ರೈತರು ಉತ್ಪಾದಿಸಿದ ಹಾಲನ್ನು ಸಂಸ್ಕರಿಸಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನ ಗಳನ್ನು ನೀಡಲು ಇಂತಹ ನಂದಿನಿ ಕ್ಷೀರಮಳಿಗೆ ಅತ್ಯವಶ್ಯಕವಾಗಿದೆ. ಈ ಕ್ಷೀರಮಳಿಗೆಯಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲಾಗುವುದು ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದ್ದಾರೆ.
ಕಾರ್ಕಳದ ಬಂಡಿಮಠದ ಬಳಿ ‘ನಂದಿನಿ’ ನೂತನ ಕ್ಷೀರಮಳಿಗೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ನಂದಿನಿ ಕ್ಷೀರಮಳಿಗೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ರಾದ ಸಾಣೂರು ನರಸಿಂಹ ಕಾಮತ್, ಮುಡಾರು ಸುಧಾಕರ ಶೆಟ್ಟಿ, ಸ್ಮಿತಾ ಆರ್ ಶೆಟ್ಟಿ, ಕಾರ್ಕಳ ಪುರಸಭೆ ಸದಸ್ಯರು, ಕ್ಷೀರಮಳಿಗೆ ನಿರ್ವಾಹಕರಾದ ಸೀತಾರಾಮ್ ಮತ್ತು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.
Next Story