ತೊಕ್ಕೊಟ್ಟು : ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಉಳ್ಳಾಲ : ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸಿ, ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಕ್ಯಾನ್ಸರ್ ಆಸ್ಪತ್ರೆ ಒದಗಿಸಿ ಸರ್ಕಾರಿ ಆಸ್ಪತ್ರೆ ಸರಿಪಡಿಸುವಂತೆ ಒತ್ತಾಯಿಸಿ ಉಳ್ಳಾಲ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ ತಂಗುದಾಣ ಬಳಿ ಸಾಮೂಹಿಕ ಧರಣಿ ಸತ್ಯಾಗ್ರಹ ಬುಧವಾರ ನಡೆಯಿತು.
ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮುಖಂಡ ಸುನೀಲ್ ಬಜಾಲ್ ಅವರು ಕೊರೊನ ಜಿಲ್ಲೆಯಲ್ಲಿ ತೀವ್ರ ಗೊಳ್ಳಲು ಸರ್ಕಾರ ದ ನೀತಿ ಕಾರಣ. ಕೊರೊನದ ಹೆಸರಿನಲ್ಲಿ ದುಡ್ಡು ಮಾಡಿದ್ದು ಖಾಸಗಿ ಆಸ್ಪತ್ರೆ ಮತ್ತು ಸರ್ಕಾರ ದ ಪ್ರತಿನಿಧಿಗಳು. ಖಾಸಗಿ ಆಸ್ಪತ್ರೆಗಳ ಲೂಟಿ ಗೆ ಕಡಿವಾಣ ಹಾಕಲು ಸರ್ಕಾರಿ ಆಸ್ಪತ್ರೆ ಒದಗಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ, ಕೃಷ್ಣಪ್ಪ ಸಾಲ್ಯಾನ್, ಅಶ್ರಫ್ ಕೆಸಿರೋಡ್, ದಿನೇಶ್ ಕುಂಪಲ, ಕರೀಂ ಉಳ್ಳಾಲ, ಸೋಶಿಯಲ್ ಫಾರೂಕ್, ರಫೀಕ್ ಹರೇಕಳ, ನಾಸೀರ್ ಸಾಮಣೀಗೆ, ಅಶ್ರಫ್ ಹರೇಕಳ, ಸುನೀಲ್ ಕುತ್ತಾರ್, ಸಂತೋಷ್ ಬಜಾರ್, ಜನಾರ್ದನ ಕುತ್ತಾರ್, ಜಯಂತ ನಾಯಕ್, ಪದ್ಮಾವತಿ ಶೆಟ್ಟಿ, ಅಲ್ತಾಫ್ ಮುಡಿಪು, ಅರುಣ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.