ಹಸಿ ಮೀನು ಮಾರಾಟಗಾರರ ಸಮಾವೇಶ
ಉಡುಪಿ, ನ. 2: ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ ವತಿಯಿಂದ ಉಡುಪಿ ತಾಲೂಕು ಬೀದಿ ಬದಿ ಹಾಗೂ ಮನೆಮನೆ ಮಾರಾಟ ಮಾಡುವ ಹಸಿ ಮೀನು ಮಾರಾಟಗಾರರ ಸಮಾವೇಶವು ಸೋಮವಾರ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ (ಸಿಐಟಿಯು) ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷ ಕೆ.ಶಂಕರ್ ಮಾತಾಡಿ ಬೀದಿ ಬದಿ ಮೀನು ಮಾರಾಟ ಮಾಡುವವರ ಸಮಸ್ಯೆ ಬಗ್ಗೆ ಹಾಗೂ ಮುಂದಿನ ಹೋರಾಟ ಬಗ್ಗೆ ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಕವಿರಾಜ್ ಎಸ್., ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಐಎಡಬ್ಲುಯು ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಮೀನು ಮಾರಾಟಗಾರರಾದ ನಜೀರ್ ಮೂಡಬೆಟ್ಟು, ಸುಮತಿ ಕಿನ್ನಿಮುಲ್ಕಿ, ಸುಂದರಿ ಕೊರಂಗ್ರಪಾಡಿ ಉಪಸ್ಥಿತರಿದ್ದರು.
Next Story